ಓಡಬಾಯಿ:ತೆಂಗಿನ ಮರದಲ್ಲಿದ್ದ ಜೇನು ನೊಣ ಓಡಿಸುವುದಕ್ಕೆ ಬೆಂಕಿಯ ಪ್ರಯೋಗ

0

ಮರದ ತುದಿಗೆ ಬೆಂಕಿ ವ್ಯಾಪಿಸಿ ನೋಡುಗರ ಮನದಲ್ಲಿ ಮೂಡಿದ ಕೌತುಕ

ತೆಂಗಿನ ಮರದ ಮೇಲ್ಭಾಗದಲ್ಲಿದ್ದ ಜೇನು ನೊಣಗಳನ್ನು ಓಡಿಸಲು ಬೆಂಕಿಯ ಪ್ರಯೋಗ ಮಾಡಿ ಮರಕ್ಕೆ ಬೆಂಕಿ ಹಿಡಿದ ಸ್ವಾರಸ್ಯಕರ ಘಟನೆ ಡಿಸೆಂಬರ್ 5ರಂದು ಸುಳ್ಯದ ಓಡಬಾಯಿ ಸಮೀಪ ನಡೆದಿದೆ.

ಅಗ್ನಿಶಾಮಕ ಕಚೇರಿಯ ಬಳಿ ಇರುವ ಮನೆಯೊಂದರ ತೆಂಗಿನ ಮರದಲ್ಲಿ ಕೋಲು ಜೇನು ಗೂಡು ಕಟ್ಟಿದ್ದು ಇದರಿಂದಾಗಿ ಕಾಯಿಗಳನ್ನು ಕೊಯ್ಯಲು ಕಷ್ಟವಾಗುತ್ತಿತ್ತು ಎನ್ನಲಾಗಿದೆ. ಇದಕ್ಕೆ ಬುದ್ಧಿ ಉಪಯೋಗಿಸಿದ ಮನೆಯವರು ಮರದ ಮೇಲಿರುವ ಜೇನು ಗೂಡಿಗೆ ಬೆಂಕಿಯ ಶಾಖವನ್ನು ನೀಡಲು ಮರವೇರಿ ಪ್ರಯತ್ನಿಸುತ್ತಿರುವಾಗ ಏಕಾಏಕಿ ಬೆಂಕಿ ಮಡಲಿಗೆ ತಾಗಿ ಬೃಹದಾಕಾರದಲ್ಲಿ ಬೆಂಕಿ ವ್ಯಾಪಿಸಿದೆ. ಇದನ್ನು ನೋಡಿದ ಸ್ಥಳೀಯರು ಮತ್ತು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ತೆಂಗಿನ ಮರದ ಮೇಲೆ ಈ ರೀತಿ ಬೆಂಕಿ ಕಾಣಲು ಕಾರಣವೇನೆಂದು ಕೌತುಕದಿಂದ ನೋಡಲು ಆರಂಭಿಸಿದರು.
ಕೂಡಲೆ ಪಕ್ಕದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಯವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.