ಸುಳ್ಯ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಭಕ್ತಿ ಸಡಗರದ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

0

ಆಕರ್ಷಕ ಪಾಲ್ ಕೊಂಬು ಮೆರವಣಿಗೆ, ಸುಮಧುರ
ಭಕ್ತಿ ಗೀತೆಗಳ ಗಾನ ಸುಧೆ- ಯಕ್ಷಗಾನ ಬಯಲಾಟ

ಸುಳ್ಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ 29 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಜಟ್ಟಿಪಳ್ಳ ಎಸ್.ಕೆ.ಸತೀಶ್ ಗುರುಸ್ವಾಮಿ ಯವರ ನೇತೃತ್ವದಲ್ಲಿ ಜರುಗಿತು.

ಪ್ರಾತ:ಕಾಲ ಪುರೋಹಿತ್ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಉಷಾ ಪೂಜೆಯು ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಹಳೆಗೇಟು ಬಳಿಯಿಂದ ಅಯ್ಯಪ್ಪ ಭಕ್ತಾದಿಗಳ ಪಾಲ್ ಕೊಂಬು ಮೆರವಣಿಗೆಯು ಸುಳ್ಯ ಮುಖ್ಯ ರಸ್ತೆಯ ಮೂಲಕ ಗಾಂಧಿನಗರದವರೆಗೆ ಸಾಗಿ ಹಿಂತಿರುಗಿ ರಥಬೀದಿಯ ಮೂಲಕ ಚೆಂಡೆ ವಾದ್ಯ ಘೋಷಗಳೊಂದಿಗೆ ಬಾಲಕಿಯರ ದೀಪಾರಾಧನೆಯ ಬೆಳಕಿನೊಂದಿಗೆ, ಆಕರ್ಷಕ ಕುಣಿತ ಭಜನೆಯೊಂದಿಗೆ ಸಿಡಿ ಮದ್ದಿನ ಪ್ರದರ್ಶನದೊಂದಿಗೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದ ಅಯ್ಯಪ್ಪ ಸ್ವಾಮಿಯ ಸನ್ನಿಧಾನದವರೆಗೆ ಸಾಗಿ ಬಂತು. ಬಳಿಕ ಗುರುಸ್ವಾಮಿಯವರ ನೇತೃತ್ವದಲ್ಲಿ ಮಹಾಪೂಜೆಯಾಗಿ ಮೇಲೇರಿಗೆ ಅಗ್ನಿ ಸ್ಪರ್ಶವು ಅಯ್ಯಪ್ಪ ವೃತಧಾರಿಗಳಿಂದ ನಡೆಯಿತು.

ದೀಪೋತ್ಸವದ ಪ್ರಯುಕ್ತ ಕಲಾ ವೇದಿಕೆಯಲ್ಲಿ ಗಾಯಕ ಶಿವಪ್ರಸಾದ್ ಆಲೆಟ್ಟಿ ನಿರ್ದೇಶನದ
ಶಿವ ಸ್ವರ ಮೆಲೋಡೀಸ್ ರವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮವು ನಡೆಯಿತು.
ಬಳಿಕ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು ಬಾಳ ಮಂಗಳೂರು ಇವರಿಂದ ಧರ್ಮದೈವ ಧೂಮಾವತಿ ಎಂಬ ತುಳು ಯಕ್ಷಗಾನ ಬಯಲಾಟವು ಪ್ರದರ್ಶನ ಗೊಂಡಿತು.

ಮರುದಿನ ಪ್ರಾತ:ಕಾಲ ಅಯ್ಯಪ್ಪವೃತಧಾರಿಗಳಿಂದ ಅಗ್ನಿ ಸೇವೆಯು ನಡೆಯಿತು.
ತಾಲೂಕಿನ ಹಲವು ಭಾಗಗಳಿಂದ ಅಯ್ಯಪ್ಪ ವೃತಧಾರಿಗಳು ಸುಮಾರು 500 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಅಯ್ಯಪ್ಪಸೇವಾಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.