ಸುಳ್ಯ ಶ್ರೀ ಭಗವತಿ ಯುವ ಸೇವಾ ಸಂಘದ ಸದಸ್ಯರಿಂದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಗರ್ಭಗುಡಿ ಸ್ವಚ್ಚತಾ ಕಾರ್ಯಕ್ರಮವು ಡಿ.27 ರಂದು ಸಂಜೆ ನಡೆಯಿತು.
















ಶ್ರೀ ಚೆನ್ನಕೇಶವ ದೇವರ ಗರ್ಭಗುಡಿ, ಶ್ರೀ ಆಂಜನೇಯ ದೇವರ ಗುಡಿ, ದುರ್ಗಾದೇವಿಯ ಗುಡಿಯನ್ನು ಹಾಗು ದೇವಸ್ಥಾನದ ಅಂಗಣವನ್ನು ಸ್ವಚ್ಚಗೊಳಿಸಲಾಯಿತು.

ಶ್ರೀ ಭಗವತಿ ಯುವ ಸೇವಾ ಸಂಘದ ಗೌರವಾಧ್ಯಕ್ಷರಾದ ಬೂಡು ರಾಧಾಕೃಷ್ಣ ರೈ, ಅಧ್ಯಕ್ಷರಾದ ಗೋಪಾಲ ಎಸ್. ನಡುಬೈಲು, ಉಪಾಧ್ಯಕ್ಷರಾದ ಲಕ್ಷ್ಮಣ ಕೇರ್ಪಳ, ಪದ್ಮಪ್ಪ ಬೂಡು ಪ್ರಧಾನ ಕಾರ್ಯದರ್ಶಿ ವಾಸುದೇವ ನಾಯಕ್, ಪ್ರದೀಪ್ ರೈ ಬೂಡು, ವಿಠಲ ರೈ ಬೂಡು, ಲಕ್ಷ್ಮಣ ಬೂಡು, ಬಾಲವಲೀಕಾರ್/ರಾಜಾಪುರ ಯುವ ಸಮಾಜದ ಕಾರ್ಯದರ್ಶಿ ಅಭಿಲಾಷ್ ಮಾಪಲಕಜೆ, ಖಜಾಂಜಿ ನವೀನ್ ಕುಮಾರ್ ಕಕ್ಕೆಬೆಟ್ಟು, ಜತೆಕಾರ್ಯದರ್ಶಿ ಮುರಳಿಕೃಷ್ಣ ಮುಳ್ಯ, ನಿರ್ದೇಶಕರಾದ ಪ್ರದೀಪ್ ಜಯನಗರ, ವಿನಯ್ ನೀರಬಿದಿರೆ ಹಾಗು ಸುಮಾರು 50ಕ್ಕೂ ಮಿಕ್ಕಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










