ಸುಳ್ಯದಲ್ಲಿ ಫೋನ್ ಮಾರ್ಟ್ ಶುಭಾರಂಭ

0

ಸುಳ್ಯ ಪೋಲೀಸ್ ಠಾಣಾ ಮುಂಭಾಗ ಗೋಲ್ಡನ್ ಟವರ್ ನಲ್ಲಿ ಮಿಸ್‌ಬಾ ಪೈಚಾರ್ ಮಾಲಕತ್ವದ ಫೋನ್ ಮಾರ್ಟ್ ಸಂಸ್ಥೆ ಡಿ.28 ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯ ಉದ್ಘಾಟನೆಯನ್ನು ದ.ಕ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ರವರು ನೆರವೇರಿಸಿದರು.
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹಿದ್ ರವರು ಸಂಸ್ಥೆಯ ಪ್ರಥಮ ಗ್ರಾಹಕರಿಗೆ ಮೊಬೈಲ್ ಫೋನ್ ಹಸ್ತಾಂತರಿಸಿ ಉದ್ಯಮಕ್ಕೆ ಶುಭ ಹಾರೈಸಿ ಮಾತನಾಡಿದರು.


ಉದ್ಘಾಟನಾ ಸಮಾರಂಭದ ಸಭಾ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ವಹಿಸಿ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎಂ ವೆಂಕಪ್ಪಗೌಡ, ಎನ್ ಎ ರಾಮಚಂದ್ರ, ಬೊಳುಬೈಲು ಪೀಸ್ ಸ್ಕೂಲ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಅಬೂಬಕ್ಕರ್, ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ- ಆರ್ ಬಿ ಬಶೀರ್, ಹಿರಿಯರಾದ ಹಾಜಿ ಪಿ ಇಬ್ರಾಹಿಂ,ಪಿ ಎ ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಎಲ್ಲಾ ರೀತಿಯ ಮೊಬೈಲ್ ಫೋನ್ ಗಳ ಮಾರಾಟ ಮತ್ತು ಸರ್ವಿಸ್ ನೂತನ ಮಾದರಿಯ ಕೈಗಡಿಯಾರಗಳು , ಕಾಸ್ಮೇಟಿಕ್ಸ್ ವಸ್ತುಗಳು ಲಭ್ಯವಿದ್ದು ಗ್ರಾಹಕರ ನೆಚ್ಚಿನ ಸ್ಮಾರ್ಟ್ ಫೋನ್ ಖರೀದಿಸಲು ಸುಲಭ ಕಂತುಗಳ ಸೌಲಭ್ಯಗಳು ಇರುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.