ಆಲೆಟ್ಟಿ- ದೋಣಿಮೂಲೆ ವಿಷ್ಣುಮೂರ್ತಿ ಸಪರಿವಾರದೈವಸ್ಥಾನದಲ್ಲಿ ಶ್ರೀ ದೈವಗಳ ಕೋಲೋತ್ಸವ

0

ಆಲೆಟ್ಟಿ ಗ್ರಾಮದ ದೋಣಿಮೂಲೆ
ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ಮತ್ತು ಉಪ ದೈವಗಳ ಕೋಲವು ಡಿ.28 ಮತ್ತು 29 ರಂದು ಜರುಗಿತು.

ಡಿ. 28 ರಂದು ರಾತ್ರಿ ಶ್ರೀ ದೈವಗಳ ನಡಾವಳಿಗೆ ಕೂಡಿ ವಿಷ್ಣುಮೂರ್ತಿ ದೈವದ ತೊಡಂಞಲ್ ನಡೆಯಿತು. ಮರುದಿನ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಹಾಗೂ ಶ್ರೀ ಪಾಷಾಣಮೂರ್ತಿ ದೈವದ ಮತ್ತು ಶ್ರೀ ಗುಳಿಗ ದೈವಗಳ ಕೋಲವು ನಡೆಯಿತು.

ಆಗಮಿಸಿದ ಎಲ್ಲಾ ಬಂಧು ಮಿತ್ರರಿಗೆ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು. ‌ಪುರುಷೋತ್ತಮ ದೋಣಿಮೂಲೆ ಮತ್ತು ಅರುಣೋದಯ ದೋಣಿಮೂಲೆ ಸಹೋದರರು ಹಾಗೂ ಮನೆಯವರು ಸರ್ವರನ್ನೂ ಸ್ವಾಗತಿಸಿದರು.ಕುಟುಂಬಸ್ಥರು ಮತ್ತು ಊರ ಪರ ಊರಿನ ಬಂಧು ಮಿತ್ರರು ಆಗಮಿಸಿದ್ದರು.