ಜ.14: ನಾಗಪಟ್ಟಣ ಸದಾಶಿವ ದೇವಸ್ಥಾನದ ನೂತನ ಯಾಗಶಾಲೆಯ ಲೋಕಾರ್ಪಣೆ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಯಾಗ ಶಾಲೆಯ ಲೋಕಾರ್ಪಣೆ ಮತ್ತು ‌ಅನುಷ್ಠಾನಗಳು ಬ್ರಹ್ಮಶ್ರೀ ವೇದಮೂರ್ತಿ ಆರೋತ್ ಪದ್ಮನಾಭ ತಂತ್ರಯವರ ಮಾರ್ಗದರ್ಶನದಲ್ಲಿ ಜ. 14 ರಂದು ನಡೆಯಲಿದೆ.


ಪೂರ್ವಾಹ್ನ ಗಂಟೆ 8.00 ರ ಶುಭ ಮುಹೂರ್ತದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ಊರ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ನಡೆಯಲಿರುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ತಿಳಿಸಿದರು.