ರಾಮ ಮಂದಿರದ ಬ್ರಹ್ಮಕಲಶೋತ್ಸವದ ಪದಾಧಿಕಾರಿಗಳ ಸಭೆ

0

ಸುಳ್ಯದ ಶ್ರೀ ರಾಮ ಭಜನಾ ಮಂದಿರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಮುದ್ರಣದ ಹಾಗೂ ಆರ್ಥಿಕ ‌ಕ್ರೋಢಿಕರಣದ ಕುರಿತು ಪದಾಧಿಕಾರಿಗಳ ಸಭೆಯು ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ರವರ ಅಧ್ಯಕ್ಷತೆಯಲ್ಲಿ ಜ.10 ರಂದು ನಡೆಯಿತು.


ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ಒಟ್ಟು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಆರ್ಥಿಕ ಸಮಿತಿ ಸಂಚಾಲಕ ಅಶೋಕ ಪ್ರಭು,
ಸಮಿತಿ ಕೋಶಾಧಿಕಾರಿ ಡಾ.ಲೀಲಾಧರ್ ರವರು ಕಾರ್ಯಕ್ರಮದ ಅಂದಾಜು ಅಯ ವ್ಯಯ ಗಳ ಬಗ್ಗೆ ಹಾಗೂ ಆರ್ಥಿಕ ಕ್ರೋಢಿಕರಣದ ಬಗ್ಗೆ ವಿವರ ನೀಡಿದರು.

ಧರ್ಮದರ್ಶಿ ಮಂಡಳಿಯ ಸದಸ್ಯರು ಮತ್ತು ಪದಾಧಿಕಾರಿಗಳು ಸಲಹೆ ನೀಡಿದರು. ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ವಾಸುದೇವ ನಾಯಕ್ ವಂದಿಸಿದರು.