ಸುಳ್ಯ : ಕೆ.ವಿ.ಜಿ. ಡೆಂಟಲ್ ಕಾಲೇಜಿಗೆ 36 ರ್‍ಯಾಂಕ್‌ಗಳು

0

ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ ದಂತ ವ್ಯೆದ್ಯಕೀಯ (ಬಿ.ಡಿ.ಯಸ್) ಹಾಗೂ ಸ್ನಾತಕೋತ್ತರ ವಿಭಾಗ (ಎಂ.ಡಿ.ಎಸ್) ಪರೀಕ್ಷೆಗಳಲ್ಲಿ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು ದಂತ ವ್ಯೆದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ೦೮ ರ್‍ಯಾಂಕುಗಳನ್ನು, ದಂತ ವ್ಯೆದ್ಯಕೀಯ ಪದವಿ ವಿಭಾಗದಲ್ಲಿ ೨೮ ರ್‍ಯಾಂಕ್‌ಗಳನ್ನು ಹೀಗೆ ಒಟ್ಟು ೩೬ ರ್‍ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರೊಸ್ತೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸುಹಾಸ್ ರಾವ್, ಅವರ ಮಾರ್ಗದರ್ಶನದಲ್ಲಿ ಡಾ. ಫೆಮಿ ಮರಿಯಾ ಬೆನ್ನಿ ಎಂ.ಡಿ.ಎಸ್. ಪರೀಕ್ಷೆಯಲ್ಲಿ ೩ನೇ ರ್‍ಯಾಂಕ್, ಕನ್ಸರ್ವೇಟಿವ್ ಡೆಂಟಿಸ್ಟ್ರಿ (ಅoಟಿseಡಿvಚಿಣive ಆeಟಿಣisಣಡಿಥಿ & ಇಟಿಜoಜoಟಿಣiಛಿs) ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣಪ್ರಸಾದ್ ಎಲ್. ಅವರ ಮಾರ್ಗದರ್ಶನದಲ್ಲಿ ಡಾ. ಅಕ್ಷಯ್ ಕುಮಾರ್ ಪೈ. ಯು. ಎಂ.ಡಿ.ಎಸ್. ಪರೀಕ್ಷೆಯಲ್ಲಿ ೫ನೇ ರ್‍ಯಾಂಕ್, ಡಾ. ವಿಷ್ಣುಜಾ ವಿ.ಅರ್. ನಾಯರ್ ಮತ್ತು ಡಾ. ನಿಹಾಲ ಮರಿಯಂ ೮ನೇ ರ್‍ಯಾಂಕ್, ಪೀಡೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸವಿತಾ ಸತ್ಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಡಾ. ಪ್ರಾಪ್ತಿ ಜಯೇಶ್ ರಾವಲ್, ಎಂ.ಡಿ.ಎಸ್. ಪರೀಕ್ಷೆಯಲ್ಲಿ ೫ನೇ ರ್‍ಯಾಂಕ್, ಅಲ್ಲದೆ ಡಾ. ಶೈನಿತಾ ಸಿ.ಯಂ. ೭ನೇ ರ್‍ಯಾಂಕ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ನುಸ್ರತ್ ಫರೀದ್ ಅವರ ಮಾರ್ಗದರ್ಶನದಲ್ಲಿ ಡಾ. ಕ್ರಿಸ್ಟಾ ಜೋಸ್, ಎಂ.ಡಿ.ಎಸ್. ಪರೀಕ್ಷೆಯಲ್ಲಿ ೪ನೇ ರ್‍ಯಾಂಕ್, ಅರ್ಥೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಡಾ. ಹನೀಶ್ ಕಿರಣ್ ಪಿ.ಟಿ., ೯ನೇ ರ್‍ಯಾಂಕ್ ಪಡೆದಿರುತ್ತಾರೆ.

ದಂತ ವೈದ್ಯಕೀಯ ಪದವಿಯ ೨೦೧೮-೨೦೧೯ನೇ ಸಾಲಿನ ಪ್ರಥಮ ಬಿ.ಡಿ.ಯಸ್. ವಿಭಾಗದಲ್ಲಿ ಡಾ| ಫೆಬಾ ಸಿ. ಟೋನಿ ೨ನೇ ರ್‍ಯಾಂಕ್, ಡಾ. ವರ್ಣ ಸಜಿ ೭ನೇ ರ್‍ಯಾಂಕ್, ಡಾ. ಸಾರಾ ಎವೆಲಿನ್ ವಿ. ೮ನೇ ರ್‍ಯಾಂಕ್, ಡಾ. ರಿಂಡ ಬೆನ್ನಿ ೧೦ನೇ ರ್‍ಯಾಂಕ್, ಪಡೆದಿರುತ್ತಾರೆ.

ಡಾ. ಸಾರಾ ಎವೆಲಿನ್ ವಿ. ೨೦೧೮-೨೦೧೯ನೇ ಸಾಲಿನ ತೃತೀಯ ಬಿ.ಡಿ.ಯಸ್ ವಿಭಾಗದಲ್ಲಿ ೩ನೇ ರ್‍ಯಾಂಕ್ ಪಡೆದಿರುತ್ತಾರೆ.

ಬಿ.ಡಿ.ಯಸ್. ಪದವಿಯ ವಿಷಯವಾರು ರ್‍ಯಾಂಕ್‌ಗಳಲ್ಲಿ ಡಾ| ಫೆಬಾ ಸಿ. ಟೋನಿ ಜನರಲ್ ಅನಾಟಮಿಯಲ್ಲಿ ಪ್ರಥಮ ರ್‍ಯಾಂಕ್, ಫಿಸಿಯೋಲಾಜಿಯಲ್ಲಿ ೪ನೇ ರ್‍ಯಾಂಕ್, ಡೆಂಟಲ್ ಅನಾಟಾಮಿ ೨ನೇ ರ್‍ಯಾಂಕ್, ಡೆಂಟಲ್ ಮೆಟಿರಿಯಲ್ಸ್ ೧೦ನೇ ರ್‍ಯಾಂಕ್, ಪ್ರಿಕ್ಲೀನಿಕಲ್ ಪ್ರೊಸ್ತೋಡಾಂಟಿಕ್ಸ್ ೨ನೇ ರ್‍ಯಾಂಕ್, ಪೆರಿಯೊಡೋಂಟಿಕ್ಸ್ ೭ನೇ ರ್‍ಯಾಂಕ್ ಹಾಗೂ ಕನ್ಸರ್‌ವೇಟಿವ್ ಡೆಂಟಿಸ್ಟ್ರಿ ೫ನೇ ರ್‍ಯಾಂಕ್ ಪಡೆದಿರುತ್ತಾರೆ.

ಡಾ. ವರ್ಣ ಸಜಿ ಜನರಲ್ ಅನಾಟಮಿಯಲ್ಲಿ ೭ನೇ ರ್‍ಯಾಂಕ್, ಡೆಂಟಲ್ ಅನಾಟಾಮಿ ೬ನೇ ರ್‍ಯಾಂಕ್, ಡೆಂಟಲ್ ಮೆಟಿರಿಯಲ್ಸ್ ೬ನೇ ರ್‍ಯಾಂಕ್, ಒರಲ್ ಸರ್ಜರಿ ೮ನೇ ರ್‍ಯಾಂಕ್ ಹಾಗೂ ಕನ್ಸರ್‌ವೇಟಿವ್ ಡೆಂಟಿಸ್ಟ್ರಿ ೪ನೇ ರ್‍ಯಾಂಕ್ ಪಡೆದಿರುತ್ತಾರೆ.
ಡಾ. ಸಾರಾ ಎವೆಲಿನ್ ವಿ. ಜನರಲ್ ಅನಾಟಮಿಯಲ್ಲಿ ೬ನೇ ರ್‍ಯಾಂಕ್, ಅರ್ಥೋಡೋಂಟಿಕ್ಸ್ ೧೦ನೇ ರ್‍ಯಾಂಕ್, ಪ್ರೊಸ್ತೋಡಾಂಟಿಕ್ಸ್ ೧೦ನೇ ರ್‍ಯಾಂಕ್ ಹಾಗೂ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ೫ನೇ ರ್‍ಯಾಂಕ್ ಪಡೆದಿರುತ್ತಾರೆ.

ಡಾ. ರಿಂಡ ಬೆನ್ನಿ ಜನರಲ್ ಅನಾಟಮಿಯಲ್ಲಿ ೮ನೇ ರ್‍ಯಾಂಕ್ ಹಾಗೂ ಪ್ರಿಕ್ಲೀನಿಕಲ್ ಕನ್ಸರ್‌ವೇಟಿವ್ ಡೆಂಟಿಸ್ಟ್ರಿ ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ.

ಡಾ. ರಂಜಿತಾ ರಾಜಶೇಖರ್ ಜನರಲ್ ಅನಾಟಮಿಯಲ್ಲಿ ೫ನೇ ರ್‍ಯಾಂಕ್ ಹಾಗೂ ಒರಲ್ ಮೆಡಿಸಿನ್ ೭ನೇ ರ್‍ಯಾಂಕ್ ಪಡೆದಿರುತ್ತಾರೆ.

ಡಾ. ಸಾದಿಯ ಖಾನಂ ಜನರಲ್ ಅನಾಟಮಿಯಲ್ಲಿ ೯ನೇ ರ್‍ಯಾಂಕ್ ಪಡೆದಿರುತ್ತಾರೆ.

ಡಾ. ಅಕ್ಷಯ ಬಾಲಚಂದ್ರನ್ ಜನರಲ್ ಮೆಡಿಸಿನ್ ೧೦ನೇ ರ್‍ಯಾಂಕ್ ಪಡೆದಿರುತ್ತಾರೆ.

ಡಾ. ಎಂಜಲಿನ್ ಎಲ್ಡೊ ಕನ್ಸರ್‌ವೇಟಿವ್ ಡೆಂಟಿಸ್ಟ್ರಿ ೩ನೇ ರ್‍ಯಾಂಕ್ ಪಡೆದಿರುತ್ತಾರೆ.

ಈ ಅಭೂತಪೂರ್ವ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು, ವಿಭಾಗ ಮುಖ್ಯಸ್ಥರುಗಳನ್ನು ಹಾಗೂ ಬೋಧಕ ಸಿಬ್ಬಂದಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಇದರ ಕಮಿಟಿ ?ಬಿ? ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಕಾರ್ಯದರ್ಶಿಗಳಾದ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರುಗಳು ಅಭಿನಂದಿಸಿದ್ದಾರೆ.