ಶ್ರೀರಾಮ ಪೇಟೆಯಲ್ಲಿ ರೋಯಲ್ ಫ್ಯಾಷನ್ ರೆಡಿಮೇಡ್ ಟೆಕ್ಸ್ ಟೈಲ್ ಶುಭಾರಂಭ

0

ಸುಳ್ಯದ ಶ್ರೀರಾಮ ಪೇಟೆಯ ಸವಿನ್ ಹೊಟೇಲ್ ಮುಂಭಾಗ ವಿಶ್ವ ಸೆಂಟ್ರಲ್‌ನಲ್ಲಿ ಅಶೋಕ್ ಕಂದಡ್ಕ ಮಾಲಕತ್ವದ ರೋಯಲ್ ಫ್ಯಾಶನ್ ಫೆ.12ರಂದು ಶುಭಾರಂಭಗೊಂಡಿತು.ಸಿಐಟಿಯು ಸುಳ್ಯ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ರಾಬರ್ಟ್ ಡಿಸೋಜಾ ರಿಬ್ಬರ್ ಕತ್ತರಿಸಿ ಮಳಿಗೆಯನ್ನು ಉದ್ಘಾಟಿಸಿದರು. ಸೈಂಟ್ ಬ್ರಿಜೆಡ್ಸ್ ಚರ್ಚಿನ ಧರ್ಮ ಗುರುಗಳಾದ ರೆ|ಫಾ|ವಿಕ್ಟರ್ ಡಿಸೋಜಾ ಶುಭಾಶೀರ್ವಾದ ನೀಡಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಮಚಾದೋ ಜಯನಗರ, ನ.ಪಂ. ಸದಸ್ಯ ಡಿವೀಡ್ ದೀರಾ ಕ್ರಾಸ್ತಾ, ಸೈಂಟ್ ಬ್ರಿಜೆಡ್ಸ್ ಚರ್ಚಿನ ಪಾಲನಾ ಸಮಿತಿ ಕಾರ್ಯದರ್ಶಿ ಜೂಲಿಯನ್ ಕ್ರಾಸ್ತಾ ಬೀರಮಂಗಲ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಇಲ್ಲಿ ಪುರುಷರ, ಮಹಿಳೆಯರ, ನವನವೀನ ಮಾದರಿಯ ಬ್ರಾಂಡೆಡ್ ವಸ್ತ್ರಗಳು ಮಿತದರದಲ್ಲಿ ಲಭ್ಯವಿದೆ.