ಕಾರ್ಕಳದ ಕಾರ್ಲ ಅಡ್ವೆಂಚರ್ಸ್ ತಂಡ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಯೋಜನೆ
ಅರಂಬೂರು ಪಯಸ್ವಿನಿ ನದಿಯ ಸೇತುವೆ ಬಳಿ ಬೋಟಿಂಗ್ ಉತ್ಸವ ಆರಂಭಗೊಂಡಿದೆ.
ಕಾರ್ಕಳ ಮೂಲದ ಕಾರ್ಲ ಕರಾವಳಿ ಅಡ್ವೆಂಚರ್ಸ್ ತಂಡದಪ್ರಾಯೋಜಕತ್ವದಲ್ಲಿಸ್ಥಳೀಯಜೇಸಿಐ,
ರೋಟರಿ ಹಾಗೂ ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವ ಸಮಿತಿಯವರ ಸಹಕಾರ ದಲ್ಲಿ ಬೋಟಿಂಗ್ ಉತ್ಸವ ನಡೆಯುತ್ತಿದೆ.
ಪ್ರಕೃತಿಯ ಮಡಿಲಿನಲ್ಲಿ ಸುಳ್ಯದ ಜೀವನದಿ ಪಯಸ್ವಿನಿಯ ಒಡಲಿನಲ್ಲಿ ಮನಮೋಹಕ
ದೃಶ್ಯವನ್ನು ಸವಿಯುವ ಅವಕಾಶದೊಂದಿಗೆ ನೀರಿನ ಮೇಲೆ ತೇಲಾಡಿಕೊಂಡು ಹೋಗುವ ಅವಕಾಶ ಮಾಡಿಕೊಡಲಾಗಿದೆ.
ಫೆ.18 ರ ತನಕ ಬೋಟಿಂಗ್ ರೈಡಿಂಗ್ ಅವಕಾಶವಿದ್ದು ತಲಾ ಒಬ್ಬರಿಗೆ ರೂ.200 ಮತ್ತು ವಿದ್ಯಾರ್ಥಿಗಳು ರೂ.150/- ಶುಲ್ಕ ಪಾವತಿಸಿ ರೈಡಿಂಗ್ ಮಾಡಬಹುದು ಎಂದು ತಂಡದ ಸಂಯೋಜಕ ಪ್ರಚರಿತ್ ಕಾರ್ಲ ಹಾಗೂ ಶರತ್ ಅರಂಬೂರು
ರವರು ತಿಳಿಸಿರುತ್ತಾರೆ.