ಕೆವಿಜಿ ದಂತ ಮಹಾವಿದ್ಯಾಲಯ ಹಾಗೂ ನಗರ ಪಂಚಾಯತ್ ವತಿಯಿಂದ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರ

0

ತ್ಯಾಜ್ಯ ನಿರ್ವಹಣಾ ಕಲೆ ಜೀವನದ ಪ್ರಮುಖ ಅಂಗ: ಡಾ.ಉಜ್ವಲ್ ಯು.ಜೆ. ಅಭಿಮತ

ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವುದು ನಮ್ಮ ಜೀವನದ‌ ಪ್ರಮುಖ ಅಂಗ. ತ್ಯಾಜ್ಯ ನಿರ್ವಹಣಾ ಕಲೆಯನ್ನು ಕರಗತ ಮಾಡಿದವರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಇತರರಿಗೂ ತಿಳಿಸಿ ಕೊಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕಾರ್ಯಕಾರಿ‌ ಸಮಿತಿ ಸದಸ್ಯರು ಹಾಗೂ ಕೆವಿಜಿ ಶಿಕ್ಷಣ ಸಂಸ್ಥೆಗಳ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ.ಅಭಿಪ್ರಾಯಪಟ್ಟಿದ್ದಾರೆ.


ಕೆವಿಜಿ ದಂತ ಮಹಾ ವಿದ್ಯಾಲಯದ ಪೆರಿಯೋಡೋಂಟೋಲಜಿ ಮತ್ತು ಓರಲ್ ಇಂಪ್ಲಾಂಟೋಲಜಿ ವಿಭಾಗ ಹಾಗೂ ಸುಳ್ಯ ನಗರ ಪಂಚಾಯತ್ ವತಿಯಿಂದ ಸುಳ್ಯ ನಗರ‌ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ‘ತ್ಯಾಜ್ಯ ನಿರ್ವಹಣೆ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಪಂಚಾಯತ್ ಆಡಳಿತಾಧಿಕಾರಿ, ತಹಶೀಲ್ದಾರ್ ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.


‘ತ್ಯಾಜ್ಯ ನಿರ್ವಹಣೆಯಲ್ಲಿ ನಾಗರಿಕರ‌ ಜವಾಬ್ದಾರಿ’ ಎಂಬ ವಿಷಯದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಹಾಗೂ ‘ತ್ಯಾಜ್ಯದಿಂದ ಇಂಧನ’ ಎಂಬ ವಿಷಯದಲ್ಲಿ
ಪೆಟ್ರಿಕೋರ್ ಕ್ಲೀನ್ ಹೈಡ್ರೋಜನ್ ಎನರ್ಜಿಯ ನಿರ್ದೇಶಕರಾದ ಪಟ್ಟಣ ಶೆಟ್ಟಿ ಉಪನ್ಯಾಸ ನೀಡಿದರು.


ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ, ಕೆವಿಜಿ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ‌.ಮೋಕ್ಷಾ ನಾಯಕ್,‌ಕಾಲೇಜಿನ ಪೆರಿಯೋಡೋಂಟೋಲಜಿ ವಿಭಾಗ ಮುಖ್ಯಸ್ಥರಾದ ಡಾ.ಎಂ.ಎಂ.ದಯಾಕರ್, ಪ್ರೊಫೆಸರ್ ಡಾ.ಪ್ರಕಾಶ್ ಪೈ ಉಪಸ್ಥಿತರಿದ್ದರು.


ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಸ್ವಾಗತಿಸಿ, ಡಾ.ಎಂ.ಎಂ.ದಯಾಕರ್ ವಂದಿಸಿದರು. ವಿದ್ಯಾರ್ಥಿಗಳಾದ ವಿಜಯಲಕ್ಷ್ಮಿ ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.