ಬೆಂಗಳೂರಿನಲ್ಲಿ ಸ್ಮಿತಾ ಸುಂದರೇಶ್ ಮಾಲಕತ್ವದ ಶ್ರೀ ಗಂಗಾಮಾಳಿಕ ದೇವಿ ಅಪಾರೆಲ್ಸ್ ಗಾರ್ಮೆಂಟ್ಸ್ ಶುಭಾರಂಭ

0

ಬೆಂಗಳೂರಿನ ಶಾಂಭವಿ ನಗರದ ಲಗ್ಗೇರಿಯಲ್ಲಿ ಸ್ಮಿತಾ ಸುಂದರೇಶ್ ಮಾಲಕತ್ವದ ಶ್ರೀ ಗಂಗಾಮಾಳಿಕ ದೇವಿ ಅಪಾರೆಲ್ಸ್ ಗಾರ್ಮೆಂಟ್ಸ್ ಫೆ.25ರಂದು ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು. ಈ ಸಂಸ್ಥೆಯಲ್ಲಿ ಶರ್ಟ್ ಗಳನ್ನು ಸ್ಟೀಚ್ ಮಾಡಲಾಗುತ್ತಿದ್ದು, ಪ್ರಸ್ತುತ 8 ಜನ ಉದ್ಯೋಗಿಗಳಿದ್ದಾರೆ.

ಸ್ಮಿತಾರವರು ವಿವಾಹದ ಬಳಿಕ ಬೆಂಗಳೂರಿನ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಸ್ಥಳೀಯವಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಆಲೆಟ್ಟಿ ಗ್ರಾಮದ ಗುಡ್ಡೆಮನೆ ಆನಂದ ಹಾಗೂ ಲಲಿತಾ ದಂಪತಿಯ ಪುತ್ರಿ.