ವಲ್ಪಾರೆ ಚಾರ್ಮತದಲ್ಲಿ ದೈವಗಳ ನೇಮೋತ್ಸವ

0

ನಾಲ್ಕೂರು ಗ್ರಾಮದ ಶ್ರೀ ಚಾಮುಂಡೇಶ್ವರಿ ದೈವಸ್ಥಾನ ವಲ್ಪಾರೆ ಚಾರ್ಮತದಲ್ಲಿ ಮಾ. 18 ರಂದು ಶ್ರೀ ಚಾಮುಂಡೇಶ್ವರಿ ಪುರುಷ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.


ಮಾ. 18 ರಂದು ಬೆಳಿಗ್ಗೆ ಶ್ರೀ ದೈವಗಳ ಭಂಡಾರ ತೆಗೆದು, ಬಳಿಕ ಶ್ರೀ ಚಾಮುಂಡಿ ಹಾಗೂ ಉಪ ದೈವಗಳ ನೇಮೋತ್ಸವ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.
(ವರದಿ.ಡಿ.ಹೆಚ್)