ಶ್ರೀಮತಿ ಕೆ‌ಎಂ.ಲಕ್ಷ್ಮೀ ಭಟ್ ಗುತ್ತಿನಡ್ಕ ನಿಧನ

0

ಆಲೆಟ್ಟಿ ಗ್ರಾಮದ ಗುತ್ತಿನಡ್ಕ ಯಕ್ಷಗಾನ ಕಲಾವಿದ ದಿ.ಕಮಿಲ ಮಹಾಲಿಂಗಯ್ಯ ಭಟ್ ರವರ ಧರ್ಮ ಪತ್ನಿ ಶ್ರೀಮತಿ ಕೆ‌.ಎಂ. ಲಕ್ಷ್ಮೀ ಭಟ್ ರವರು ವಯೋಸಹಜವಾಗಿ ತನ್ನ ಸ್ವಗೃಹದಲ್ಲಿ ಮಾ.27 ರಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಸೂರ್ಯನಾರಾಯಣ ಭಟ್,ಸುಬ್ರಹ್ಮಣ್ಯ ಭಟ್ ಗುತ್ತಿನಡ್ಕ, ರಾಮಚಂದ್ರ ಭಟ್, ಗಣೇಶ್ ಭಟ್, ಶಿವಶಂಕರ ಭಟ್, ಪುತ್ರಿಯರಾದ ಮಮತೇಶ್ವರೀ, ಸವಿತಾ, ಅನಿತಾ ಹಾಗೂ ಅಳಿಯಂದಿರನ್ನು,
ಸೊಸೆಯಂದಿರನ್ನು, ಮೊಮ್ಮಕ್ಕಳನ್ನು, ಮರಿಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.