ಜೇಸಿಐ ಬೆಳ್ಳಾರೆ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ

0

ಜೇಸಿಐ ಬೆಳ್ಳಾರೆ ಇದರ ವತಿಯಿಂದ ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಾ.29 ರಂದು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಯದ ಮುಖೇನ ಗುರುತಿಸಿಕೊಂಡಿದ್ದ ಪೆರುವಾಜೆ ಗ್ರಾಮ ಪಂಚಾಯಿತಿನ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ಹರಿಣಾಕ್ಷಿ ಇವರನ್ನು ಶ್ರೀಮತಿ ರಾಜೀವಿ ಆರ್ .ರೈಯವರು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಜೇಸಿಐ ಘಟಕದ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೇಸಿ ಜಗನ್ನಾಥ್ ಪೂಜಾರಿ, ಬೆಳ್ಳಾರೆ ಘಟಕದ ಪೂರ್ವ ಧ್ಯಕ್ಷರಾದ ರಾಜೀವಿ ರೈ ಬೆಳ್ಳಾರೆ ಮತ್ತು ಜೇಸಿಐ ಬೆಳ್ಳಾರೆಯ ನಿಕಟ ಪೂರ್ವಧ್ಯಕ್ಷ ರವೀಂದ್ರನಾಥ್ ರೈ ಅಜಪಿಲ ಉಪಸ್ಥಿತರಿದ್ದರು.

ಸನ್ಮಾನಿತರ ಸನ್ಮಾನ ಪತ್ರವನ್ನು ಜೇಸಿ ವೇದಿಕ್ ರೈ ವಾಚಿಸಿದರು. ಕಾರ್ಯಕ್ರಮದಲ್ಲಿ ಜೇಸಿ ವಾಣಿಯನ್ನು ಜೇಸಿ ಶಿವಕುಮಾರ್ ಮಣಿಕಾರ ಉದ್ಘೋಷಿಸಿದರು.

ಬೆಳ್ಳಾರೆ ಜೇಸಿ ಘಟಕದ ಜೊತೆಕಾರ್ಯದರ್ಶಿ ಜೇಸಿ ಪೂರ್ಣಿಮಾ ಪೆರ್ಲಂಪಾಡಿ ವಂದಿಸಿದರು,ಪ್ರಸಾದ್ ಸೇವಿತ ಸಹಕರಿಸಿದರು . ಕಾರ್ಯಕ್ರಮದಲ್ಲಿ ಜೇಸಿ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.