ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲ ಇದರ ವತಿಯಿಂದ ವಿಷು ಆಚರಣೆ ಎ. 14ರಂದು ಶ್ರೀ ಶಂಕರಭಾರತಿ ವೇದಪಾಠ ಶಾಲೆಯಲ್ಲಿ ನಡೆಯಿತು.
















ವೇದಿಕೆಯಲ್ಲಿ ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ಅಡ್ಪoಗಾಯ ಇವರು ಅಧ್ಯಕ್ಷತೆ ವಹಿಸಿದ್ಧರು. ಭಾಸ್ಕರ್ ರಾವ್ ಬಯಂಬು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಶ್ರೀಮತಿ ವಿಶಾಲ.ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಆಜ್ಜಾವರ ವಲಯ ವಿಷು ಆಚರಣೆಯ ಕುರಿತು ಮಾತನಾಡಿದರು. ಮಹಿಳಾ ಮಂಡಲ ಗೌರವಾಧ್ಯಕ್ಷರಾದ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ,ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಮತಿ ಮನೋರಮ ಪ್ರಾರ್ಥನೆ ಮಾಡಿದರು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಧನ್ಯ ಸ್ವಾಗತ ಮಾಡಿದರು. ಶ್ರೀಮತಿ ವಿಮಲಾರುಣ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಪ್ರಿಯ ದಾಮೋದರ ಶಿರುವಾಜೆ ಧನ್ಯವಾದ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಸರ್ವ ಸದಸ್ಯರು, ಪಧಾಧಿಕಾರಿಗಳು ಉಪಸ್ಥಿತರಿದ್ದರು.









