ಮೇ.1-4: ಸಂಪಾಜೆಯಲ್ಲಿ ರಂಗಮಯೂರಿ ಕಲಾ ಶಾಲೆಯ ವತಿಯಿಂದ ವಿಶೇಷ ರಂಗ ಶಿಬಿರ

0

ಸುಳ್ಯ ರಂಗಮಯೂರಿ ಕಲಾ ಶಾಲೆ ಹಾಗೂ ಊರುಬೈಲು ಭಗವಾನ್ ಸಂಘದ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಿಶೇಷ ರಂಗ ಶಿಬಿರವು ಮೇ 1ರಿಂದ 4 ರ ತನಕ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವುದು.

ರಾಜ್ಯಮಟ್ಟದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ಕಾರ್ಯಗಾರ ನಡೆಯಲಿರುವುದು. ಶಿಬಿರದಲ್ಲಿ ರಂಗಗೀತೆ, ರಂಗ ನಡೆ, ಹಾವ ಭಾವ, ಅಭಿನಯ, ಮಾತುಗಾರಿಕೆ ಮುಖವಾಡ ತಯಾರಿಕೆ, ರಂಗಾಟಗಳು, ಆರ್ಟ್ ಮತ್ತು ಕ್ರಾಫ್ಟ್, ದೇಸಿ ಆಟಗಳು ,ಪ್ರಥಮ ಚಿಕಿತ್ಸೆ ಹಾಗೂ ಬೆಂಕಿ ಅನಾಹುತದ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.
ಶಿಬಿರದಲ್ಲಿ ಭಾಗವಹಿಸಲು ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುವುದರಿಂದ ಮೊದಲು ಹೆಸರು ನೋಂದಾಯಿಸಿದ ಮಕ್ಕಳಿಗೆ ಅವಕಾಶ ನೀಡಲಾಗುವುದು. ನೋಂದಾವಣೆಗಾಗಿ 9611355496, 6363783983 ನ್ನು ಸಂಪರ್ಕಿಸುವಂತೆ ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.