ಗುತ್ತಿಗಾರು : ಪೈಕ ಮುಚ್ಚಾರ ಮನೆ ಚಿನ್ನಪ್ಪ ಗೌಡರ ಮನೆಗೆ ಮರ‌ಬಿದ್ದು ಅಪಾರ ನಷ್ಟ

0

ಶಿಕ್ಷಣ ಇಲಾಖೆಯ ನಿವೃತ್ತ ಮೇನೇಜರ್ ಗುತ್ತಿಗಾರು ಗ್ರಾಮದ ಪೈಕ ನಿವಾಸಿ ಮುಚ್ಚಾರ ಚಿನ್ನಪ್ಪ ಗೌಡರ ವಾಸ್ತವ್ಯದ ಮನೆಗೆ ಇಂದು ಸಂಜೆ ಸುರಿದ ವಿಪರೀತ ಗಾಳಿ ಮಳೆಗೆ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ದೊಡ್ಡ ತೆಂಗಿನ ಮರವೊಂದು ಬುಡ ಸಮೇತ ಬಿದ್ದು ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಮನೆ ಹಾನಿಗೊಳಗಾಯಿತು.
ಕಾರಿನ ಮೇಲ್ಭಾಗ ನುಜ್ಜುಗುಜ್ಜಾಗಿದ್ದು,ಮನೆಯ ಮೇಲ್ಛಾವಣಿ ಪುಡಿ ಪುಡಿ ಯಾಗಿದ್ದು ಅಪಾರ ಹಾನಿಯುಂಟಾಗಿದೆ.

ಮನೆಯವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ನೆರೆಕರೆಯವರು ಬಂದು ಮರವನ್ನು ತೆರವುಗೊಳಿಸಿ ಮನೆಯನ್ನು ಸ್ವಚ್ಛಗೊಳಿಸಿದರು.