ಸೋಣಂಗೇರಿ: ರಬ್ಬರ್ ಮೂರ್ತೆ ತರಬೇತಿ ಮತ್ತು ಮಾಹಿತಿಯ ಕಾರ್ಯಾಗಾರ ಸಮಾರೋಪ

0

ರಬ್ಬರ್ ಪ್ರಾದೇಶಿಕ (ಬೋರ್ಡ್) ಮಂಡಲಿ ಮತ್ತು ರಬ್ಬರ್ ಬೆಳೆಗಾರರ ಸಂಘ ಐವರ್ನಾಡು ಇದರ ಸಹಯೋಗದೊಂದಿಗೆ ೮ ದಿನಗಳ ಕಾಲ
ನಡೆದ ರಬ್ಬರ್ ಮೂರ್ತೆ ತರಬೇತಿ ಮತ್ತು ಮಾಹಿತಿಯ ಕಾರ್ಯಾಗಾರವು ಮೇ.14 ರಂದು ಸಮಾರೋಪಗೊಂಡಿತು.

ಜಾಲ್ಸೂರು ಗ್ರಾಮದ ಸೋಣಂಗೇರಿ ಸಮೀಪದ ಗೋಂಟಡ್ಕ ಜಯಪ್ರಕಾಶ್ ರೈ ದೇರ್ಲರವರ ತೋಟದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ವಿನಯಕುಮಾರ್ ತೊಡಿಕಾನ, ರಾಜೇಶ್.ಎಸ್.ಎನ್.ಉಬರಡ್ಕ,ಭಾನುಚಂದ್ರ ಕುಕ್ಕಂದೂರು, ಅರ್ಚನ ಕುದ್ಪಾಜೆ, ವಸಂತಿ ಕುದ್ಪಾಜೆ, ಭಾಸ್ಕರ.ಜಿ ಏನೆಕಲ್ಲು, ಬೆಳ್ಯಪ್ಪ ಗೌಡ ಮರ್ಕಂಜ, ವಸಂತಿ ಮಿಲ್ಟ್ರಿ ಗ್ರೌಂಡ್, ಲೋಕವಾಣಿ ಕಂದಡ್ಕ, ಶಶಿಕಲಾ ಕಂದಡ್ಕ, ಅಂಬಿಕಾ ಕೂಟೇಲು, ಮೇಘಲಾ ಕೂಟೇಲು, ಅಶೋಕ ಕೂಟೇಲು, ವಿಘ್ನೇಶ್ವರ ಕಂದಡ್ಕ, ಪ್ರಭು ಮಿಲ್ಟ್ರಿ ಗ್ರೌಂಡ್, ಪ್ರವೀಣ್ ಕುಮಾರ್ ಮಿಲ್ಟ್ರಿ ಗ್ರೌಂಡ್, ಗೋಪಿಕ್.ಎಸ್.ಕೆ., ಕೃಷ್ಣವೇಣಿ ಕಂದಡ್ಕ, ಶಕುಂತಲಾ ಕಂದಡ್ಕ, ಪುಷ್ಪಲತಾ ಕಂದಡ್ಕ, ಆನಂದ ರೈ ದಾರಂದಕುಕ್ಕು, ತೀರ್ಥಪ್ರಸಾದ ಮಿಲ್ಟ್ರಿ ಗ್ರೌಂಡ್, ಹೇಮಲತಾ ಕೂಟೇಲು, ಶಶಿಕಲಾ ಸಿ.ಕಂದಡ್ಕ, ರೇವತಿ ಕೂಟೇಲು, ಸತ್ಯರಾಜ್ ಮಿಲ್ಟ್ರಿ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ರಬ್ಬರ್ ಪ್ರಾದೇಶಿಕ (ಬೋರ್ಡ್) ಮಂಡಲಿಯ ಪುತ್ತೂರು ವಿಭಾಗದ ಅಭಿವೃದ್ಧಿ
ಅಧಿಕಾರಿಗಳಾದ ಅಜಿತ್ ಪ್ರಸಾದ್ ರವರು ಕಳೆದ ಇಪ್ಪತ್ತೈದು ವರ್ಷಗಳಿಂದ ಸುಮಾರು ಮೂವತ್ತಮೂರು ಸಾವಿರಕ್ಕೂ ಹೆಚ್ಚು ರಬ್ಬರ್ ಕೃಷಿಕರು ಹಾಗೂ ಮೂರ್ತೆದಾರರಿಗೆ ತರಬೇತಿಯನ್ನು ನೀಡಿದ ಹಿರಿಯ ತರಬೇತುದಾರರಾದ ಸೊಕ್ಕ ಲಿಂಗಂ ಕೆ ಕುಕ್ಕನ್ನೂರು ಮತ್ತು ಶ್ರೀಮತಿ ಶಿವಯೋಗಂ ಎಸ್.ರವರಿಗೆ ಕಿರು ಕಾಣಿಕೆ ನೀಡಿ ಗೌರವಿಸಿದರು.

ಹಾಗೂ ಮರದಾನಿಗಳಾದ ಜಯಪ್ರಕಾಶ್ ರೈ ದೇರ್ಲರವರಿಗೂ ಕಿರು ಕಾಣಿಕೆ ನೀಡಿ ಗೌರವಿಸಿದರು.

 ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜಾರಾಮ ರಾವ್ ರಬ್ಬರ್ ಬೆಳೆಗಾರರ ಸಂಘ ಐವರ್ನಾಡು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ರಾಧಾಕೃಷ್ಣ ಉಪಾಧ್ಯಕ್ಷರು ರಬ್ಬರ್ ಬೆಳೆಗಾರರ ಸಂಘ ಐವರ್ನಾಡು, ಕಾರ್ಯದರ್ಶಿ ಧನಂಜಯ ಐವರ್ನಾಡು, ಸುಳ್ಯ ತಾಲೂಕಿನ ರಬ್ಬರ್ ಪ್ರಾದೇಶಿಕ ಮಂಡಲಿಯ ಉಪ ಅಭಿವೃದ್ಧಿ ಅಧಿಕಾರಿ  ಸಿಜುಮ್ಯಾಥ್ಯು, ಶ್ರೀ ಕೃಷ್ಣ ಭಜನಾ ಮಂದಿರ ಸೋಣಂಗೇರಿ ಆಡಳಿತ ಸಮಿತಿ ಅಧ್ಯಕ್ಷ  ಗಿರಿಧರ ಗೌಡ ನಾಯರ್‌ಹಿತ್ಲು, ಸಿಬ್ಬಂದಿ ಫ್ರಾನ್ಸಿಸ್ ಡಿಸೋಜ ಉಪಸ್ಥಿತರಿದ್ದರು. ತರಬೇತುದಾರರಾದ ಸತ್ಯಶಾಂತಿತ್ಯಾಗಮೂರ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.