ಬೆಳ್ಳಾರೆ ಜೇಸಿಐ ವತಿಯಿಂದ ತರಬೇತಿ ಕಾರ್ಯಕ್ರಮ

0
      ಜೇಸಿಐ ಬೆಳ್ಳಾರೆ ವತಿಯಿಂದ ಮೇ.23 ರಂದು ನ್ಯಾಷನಲ್ ಟ್ರೈನಿಂಗ್ ಡೇ ಪ್ರಯುಕ್ತ ಡಾ. ಶಿವರಾಮ ಕಾರಂತ ಫಸ್ಟ್ ಗ್ರೇಡ್ ಕಾಲೇಜ್ ಬೆಳ್ಳಾರೆ ಪೆರುವಾಜೆ ಇಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಷನಲ್ ಟ್ರೈನರ್ ಜೇಸಿ ವೇಣುಗೋಪಾಲ್ ಎಸ್.ಜೆ ಭಾಗವಹಿಸಿ  ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. 

ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ  ದಾಮೋದರ ಕಣಜಾಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಬೆಳ್ಳಾರೆ ಘಟಕದ ಅಧ್ಯಕ್ಷರಾದ ಜಗದೀಶ್ ರೈ ಪೆರುವಾಜೆ ವಹಿಸಿದರು. ಕಾರ್ಯಕ್ರಮದಲ್ಲಿ ಜೇಸಿ ವಾಣಿ ಯನ್ನು ಜೇಸಿ ಯಾಹ್ಯ ಬೆಳ್ಳಾರೆ  ಉದ್ಘೋಷಿಸಿದರು,  ಅತಿಥಿಗಳ ಪರಿಚಯವನ್ನು ಜೇಸಿ ವೇದಿಕ್ ರೈ ಮಾಡಿದರು, ಬೆಳ್ಳಾರೆ ಜೇಸಿ ಘಟಕದ ನಿಕಟ ಪೂರ್ವಾಧ್ಯಕ್ಷರಾದ ರವೀಂದ್ರನಾಥ್ ಶೆಟ್ಟಿ ಅಜಪಿಲ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಜೇಸಿ ಪೂರ್ವ ಧ್ಯಕ್ಷರುಗಳು ಮತ್ತು ಜೇಸಿ  ಸದಸ್ಯರುಗಳು ಭಾಗವಹಿಸಿದ್ದರು.