ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲಾ ಪ್ರಾರಂಭೋತ್ಸವ

0


ರೋಟರಿ ಕ್ಲಬ್ ಸುಳ್ಯ ಇದರ ಪ್ರಾ ಯೋಜಕತ್ವದಲ್ಲಿ ಮುನ್ನಡೆಸಲ್ಪಡುವ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ(ರಿ.) ಆಡಳಿತಕ್ಕೆ ಒಳಪಟ್ಟ ಪ್ರತಿಷ್ಟಿತ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಮೇ. ೩೧ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಸಂಸ್ಥೆಯ ಸಂಚಾಲಕರಾದ ರೋಟೇರಿಯನ್ ಪಿ ಪಿ. ಪಿಹೆಚ್‌ಎಫ್ ಗಿರಿಜಾ ಶಂಕರ ತುದಿಯಡ್ಕ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, “ಮಕ್ಕಳನ್ನು, ಪೋಷಕರನ್ನು ಬರ ಮಾಡಿಕೊಳ್ಳುವುದು ಆಡಳಿತ ಮಂಡಳಿ ಮತ್ತು ಶಿಕ್ಷಕರ ಕರ್ತವ್ಯವಾಗಿರುತದೆ. ಆ ನಿಟ್ಟಿನಲ್ಲಿ ನಾವಿಂದು ಸೇರಿದ್ದೇವೆ. ೨೦೨೪-೨೫ರ ಸಾಲಿನ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಪ್ರಗತಿಯನ್ನು ಕಾಣುವಂತಾಗಲಿ, ಜೊತೆಗೆ ಶಿಕ್ಷಕರು ಗುರುತಿಸಿಕೊಳ್ಳುವಂತಾಗಲಿ”ಎಂದು ಶುಭ ಹಾರೈಸಿದರು.


ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಯವರು ಸಂಸ್ಥೆಯ ಬಗ್ಗೆ ಪ್ರಸ್ತಾವನೆ ಮಾಡಿ ಎಲ್ಲರನ್ನು ಸ್ವಾಗತಿಸಿದರು. ಹೊಸದಾಗಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇರ್ಪಡೆಗೊಂಡ ಶ್ರೀಮತಿ ರೋಹಿಣಿ ಅಂಬೆಕಲ್ಲುರವರನ್ನು ಸಭೆಗೆ ಪರಿಚಯಿಸಿದರು.೬ನೇ ತರಗತಿ ವಿದ್ಯಾರ್ಥಿ ಚಿನ್ಮಯಿ ಕೆ. ಕೆ. ಅಸೆಂಬ್ಲಿಯನ್ನು ನಡೆಸಿಕೊಟ್ಟನು.ವಿದ್ಯಾರ್ಥಿಗಳು ಶಾಲಾ ಪ್ರಾರ್ಥನಾ ಗೀತೆಗಳನ್ನು ಹಾಡಿದರು. ಸಂಸ್ಥೆಯ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.ಶಾಲಾ ಆವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಯಿತು.