ಕೊಡಿಯಾಲಬೈಲು ಸ.ಕಿ.ಪ್ರಾ. ಶಾಲೆಗೆ ಬರೆಯುವ ಪುಸ್ತಕ ಕೊಡುಗೆ

0

ಸಂಧ್ಯಾರಶ್ಮಿ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ,ಸುಳ್ಯ, ಇದರ ವತಿಯಿಂದ ಸ. ಕಿ. ಪ್ರಾ.ಶಾಲೆ ಕೊಡಿಯಾಲಬೈಲು ಇಲ್ಲಿಗೆ ಜೂ.3 ರಂದು ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ರಂಗಯ್ಯ, ನಿರ್ದೇಶಕರುಗಳಾದ ಸುಬ್ರಹ್ಮಣ್ಯ ಹೊಳ್ಳ, ಕೇಶವ ಮಾಸ್ಟರ್, ಗೋಪಾಲ್ ರಾವ್, ಸಂಘದ ಸಿಬ್ಬಂಧಿಗಳಾದ ಶ್ರೀಮತಿ ಜಯಂತಿ ಎಂ. ಅರ್ ಹಾಗೂ ಅನಿಲ್ ಕುಮಾರ್ ಉಪಸಿತರಿದ್ದರು.

ಲಯನ್ ವೀರಪ್ಪ ಗೌಡ ಕಣಕಲ್, ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಸುಬ್ಬಯ್ಯ ಸಹಶಿಕ್ಷಕಿ ಶ್ರೀಮತಿ ರೇಷ್ಮಾ ಸಹಕರಿಸಿದರು.