ಎಸ್. ಎಸ್. ಎಲ್. ಸಿ ಮರು ಮೌಲ್ಯಮಾಪನದಲ್ಲಿ ಕೆ ಎಸ್ ಜಿ, ನಿಂತಿಕಲ್ಲು ವಿದ್ಯಾರ್ಥಿಗಳ ಅಂಕಗಳಲ್ಲಿ ಭಾರಿ ಹೆಚ್ಚಳ :

0

2023-24ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕೆ ಎಸ್ ಜಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಹೆಚ್ಚುವರಿ ಅಂಕಗಳನ್ನು ಪಡೆಯುವ ಮೂಲಕ ತಮ್ಮ ಶೈಕ್ಷಣಿಕ ಸಾಧನೆಯನ್ನು ಮೆರೆದಿದ್ದಾರೆ.

ಬಾಲಾಡಿ ಮುರಳೀಧರ ಬಿ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರಿ ನೇಹಾ. ಬಿ ಇವರು ಹೆಚ್ಚುವರಿಯಾಗಿ 9 ಅಂಕಗಳನ್ನು ಪಡೆದಿದ್ದು, ಇದೀಗ 601 ಅಂಕಗಳನ್ನು ಪಡೆದಿರುತ್ತಾರೆ.

ಅಡ್ಡಬೈಲು ತಾರಾನಾಥ್ ರೈ ಮತ್ತು ಸುರೇಖಾ ದಂಪತಿಗಳ ಪುತ್ರಿ ಸ್ತುತಿ ರೈ ಇವರು 544 ಅಂಕಗಳಿಗೆ ಬದಲು 551 ಅಂಕಗಳನ್ನು ಹೊಂದಿರುತ್ತಾರೆ.

ಅಲೆಕ್ಕಾಡಿ ಮೋಹನ್. ಕೆ ಮತ್ತು ಭುವನೇಶ್ವರಿ ದಂಪತಿಗಳ ಪುತ್ರಿ ಆಕಾಂಕ್ಷ. ಎ. ಎಂ ಇವರು ಹೆಚ್ಚುವರಿ 15 ಅಂಕಗಳನ್ನು ಪಡೆದು, 545 ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿರುತ್ತಾರೆ.

ಮುರುಳ್ಯ ಗ್ರಾಮದ ಪೂದೆ ಮನೆ ಪುಟ್ಟಣ್ಣ ಆಚಾರ್ಯ ಮತ್ತು ಕುಸುಮಾವತಿ ಕೆ ದಂಪತಿಗಳ ಪುತ್ರಿ ಭವಿಷ್ಯ ಪಿ ಇವರು 535 ಅಂಕಗಳಿಗೆ ಬದಲು 541 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿರುತ್ತಾರೆ.