ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ಸದಸ್ಯರಾಗಿದ್ದು, ಜೂ.17 ರಂದು ನಿಧನರಾದ ಜಾನ್ ಸಿಪ್ರಿ ಡಿಸೋಜಾ ರವರಿಗೆ ಮರಣ ಸಾಂತ್ವನ ನಿಧಿ ರೂ.9000/- ವನ್ನು ಮೃತರ ಪುತ್ರ ಪ್ರಶಾಂತ್ ಡಿ ಸೋಜಾ ರವರಿಗೆ ಜೂ.18 ರಂದು ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರು ವಿತರಿಸಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಸುರೇಶ್ ಎಂ.ಎಚ್, ಹರಿಪ್ರಸಾದ್ ಪಾನತ್ತಿಲ, ಹರೀಶ್.ಎಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಮೃತರ ಪತ್ನಿ ಕ್ರಿಸ್ಟಿನಾ ಡಿ ಸೋಜಾ, ಪುತ್ರಿಯರಾದ ಪ್ರಶಾಂತಿ, ಸುಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.