ಯೇನೆಕಲ್ಲು ಸ.ಹಿ. ಪ್ರಾ. ಶಾಲೆಯಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಯ ಅಧ್ಯಕ್ಷ ಅಶೋಕ್ ಕುಮಾರ್ ಅಂಬೆಕಲ್ಲು ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಪನ್ಮೂಲ ವ್ಯಕ್ತಿ ಶರತ್ ಮರ್ಗಿಲಡ್ಕ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಗುರುಗಳಾದ ಶ್ರೀಮತಿ ಚಂದ್ರಿಕಾ ಬಿ. ಸಿ. ಸ್ವಾಗತಿಸಿದರು. ದೈ.ಶಿ. ಶಿಕ್ಷಕಿ ಶ್ರೀಮತಿ ಕಮಲ ಸಿ. ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಅಂಬಿಕಾ ಸಹಶಿಕ್ಷಕ ವಂದಿಸಿದರು.
















ಯೋಗ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕ ವೃಂದದವರು, ಸ್ಥಳೀಯ ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ನವ್ಯ ಇವರು ಉಪಸ್ಥಿತರಿದ್ದರು. ಶರತ್ ಮರ್ಗಿಲಡ್ಕರ ಮಾರ್ಗದರ್ಶನದಲ್ಲಿ ಕು. ಅಕ್ಷಯ ಬಿ.ಎಂ. ರ ಪ್ರಾತ್ಯಕ್ಷತೆಯಲ್ಲಿ ಯೋಗ ಮಾಡಲಾಯಿತು.










