ನಿಂತಿಕಲ್ಲು: ಎಸ್. ಆರ್ ಪಿಕ್ಸೆಲ್ಸ್ ಶುಭಾರಂಭ

0


ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ಎಸ್.ಆರ್.ಪಿಕ್ಸೆಲ್ಸ್ ಜು 14 ರಂದು ಶುಭಾರಂಭಗೊಂಡಿತು.


ಬಾಳಿಲ ತಿರುಮಲೇಶ್ವರ ಪೌರೋಹಿತ್ಯದಲ್ಲಿ ಲಕ್ಷ್ಮಿ ಪೂಜೆ ನಡೆಯಿತು. ಮರುವಂಜ ಅಭಿಜ್ಞ ರೈ ಮತ್ತು ಸ್ವತಿಕ್ ರವರ ಪಾಲುದಾರಿಕೆಯ ಸಂಸ್ಥೆ ಯನ್ನು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲ್ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತ ಭಾಮುಲ್ ಯವರು ರಿಬ್ಬನ್ ಕಟ್ಟ್ ಮಾಡಿ ಶುಭ ಹಾರೈಸಿದರು.

ಸಂದರ್ಭದಲ್ಲಿ ಪಾಲುದಾರರಾ ದ ಅಭಿಜ್ಞ ರೈ ಮತ್ತು ಸ್ವತಿಕ್ ರವರು ಸ್ವಾಗತಿಸಿದರು. ಅವರ ಕುಟುಂಬ ಸದಸ್ಯರಾದ ವಿಠಲ ನಡುಮನೆ, ವಿಶ್ವನಾಥ ರೈ ಪೆರ್ಲoಪಾಡಿ, ಉಮೇಶ್ ರೈ ಮರವಂಜ , ವಿಜಯ ರೈ ಮರುವಂಜ, ವೀಣಾ ರೈ ಮರುವಂಜ , ಪ್ರಭಾಕರ ರೈ ಮರುವಂಜ, ಅಮಿತ ಆರ್ ರೈ ಮರುವಂಜ, ಶರತ್ ರೈ ಕಾಪು, ನಿಂತಿಕಲ್ ವರ್ತಕರು, ರಿಕ್ಷಾ ಚಾಲಕ ಮಾಲಕರು, ಗ್ರಾಹಕರು ಉಪಸ್ಥಿತರಿದ್ದರು. ಅಭಿಜ್ಞಾ ಆಳ್ವ ಸ್ವಾಗತಿಸಿ, ಪ್ರದೀಪ್ ರೈ ಎಣ್ಮೂರು ವಂದಿಸಿದರು. ಎಲ್ಲಿ ಎಲ್ಲ ತರಹದ ಆಮಂತ್ರಣ ಕಾರ್ಡ್, ಮದುವೆ ಆಮಂತ್ರಣ ಕಾರ್ಡ್, ಡಿಜಿಟಲ್ ಕಾರ್ಡ್, ಗೃಹ ಪ್ರವೇಶ ಕಾರ್ಡ್ , ವಿಸಿಟಿಂಗ್ ಕಾರ್ಡು, ಲೋಗೋ ಡಿಸೈನ್ ಇನ್ನಿತರ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಮಿತ ದರದಲ್ಲಿ ಮಾಡಿಕೊಡಲಾಗಿದೆಂದು ಪಾಲುದಾರ ರಾದ ಸ್ವಸ್ತಿಕ್ ರವರು ಹೇಳಿದರು