ಸುಳ್ಯ: ಪಂಜದಲ್ಲಿ ನಡೆಯುವ ಆಟಿ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸುಳ್ಯ ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ ) ಸುಳ್ಯ ಹಾಗೂ ವನಿತಾ ಸಮಾಜ (ರಿ) ಪಂಜ ಇದರ ಜಂಟಿ ಆಶ್ರಯದಲ್ಲಿ ಪಂಜದಲ್ಲಿ ನಡೆಯುವ ತಾಲ್ಲೂಕು ಮಟ್ಟದ ಆಟಿ ಸಂಭ್ರಮ 2024 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ
ಬಿಡುಗಡೆ ಕಾರ್ಯಕ್ರಮ ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ನಡೆಯಿತು.

ದ ಕ ಜಿಲ್ಲಾ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ ಬಿಡುಗಡೆ ಗೊಳಿಸಿದರು.

ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಶೆಟ್ಟಿ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಶೀಮತಿ ಅನಿತಾ ಸುತ್ತುಕೋಟೆ, ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್, ಖಜಾಂಚಿ ಶ್ರೀಮತಿ ಚಂದ್ರಾಕ್ಷಿ ರೈ ,ನಿರ್ದೇಶಕರುಗಳಾದ ಶ್ರೀಮತಿ ಪುಷ್ಪಾ ಮಾಣಿಬೆಟ್ಟು ,ಶ್ರೀಮತಿ ಶಿಲ್ಪಾಸುದೇವ್, ಶ್ರೀಮತಿ ಲಲಿತಾ ಶಾಂತಿನಗರ, ಶೀಮತಿ ಯಶೋಧ ಕುಡೆಕಲ್ಲು, ಶ್ರೀಮತಿ ಚಂದ್ರಕಲಾ ಕುತ್ತಮೊಟ್ಟೆ ಹಾಗೂ ವನಿತಾ ಸಮಾಜದ ಖಜಾಂಚಿ ಶ್ರೀಮತಿ ಸುಮಾ ಕುದ್ವ ಉಪಸ್ಥಿತರಿದ್ದರು.. ಕಾರ್ಯಕ್ರಮವು ಜು. 23 ರಂದು ಪಂಜ ವನಿತಾ ಸಮಾಜದಲ್ಲಿ ವಿವಿಧ ಸ್ಪರ್ಧೆಗಳೊಂದಿಗೆ ಹಾಗೂ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆ ಭೋಜನದೊಂದಿಗೆ ನಡೆಯಲಿದೆ.