ಕಾಂಚೋಡು: ಹಾರೆ ಪಿಕ್ಕಾಸು ಹಿಡಿದು ರಸ್ತೆ ಚರಂಡಿ ದುರಸ್ತಿಗಳಿದ ನೀರೆಯರು

0

ನರೇಗಾದ ಮೂಲಕ ಸುಮಂಗಲ ಸಂಜೀವಿನಿ ಸ್ವ ಸಹಾಯ ಸಂಘದವರ ಮಾದರಿ ಕಾರ್ಯ

ಬಾಳಿಲ ಸುಮಂಗಲ ಸಂಜೀವಿನಿ ಸಂಘದ ಮಹಿಳೆಯರಿಂದ ರಸ್ತೆ ಬದಿಯ ಚರಂಡಿ ದುರಸ್ತಿ
ಹಾರೆ ಪಿಕಾಸು ಹಿಡಿದ ಮಹಿಳಾ ಮಣಿಗಳು

ಬಾಳಿಲ ಗ್ರಾಮ ಪಂಚಾಯತ್ ನ ಆಶ್ರಯದಲ್ಲಿರುವ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ರಸ್ತೆ ಬದಿಯ ಚರಂಡಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಳೆದ 5 ವರ್ಷಗಳಿಂದ ಕೆರೆ ಹೋಳೆತ್ತುವ ಕಾರ್ಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನರೇಗಾದ ಅಡಿಯಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ. ಕಳೆದ ವರ್ಷ ಕಾಂಚೋಡು ದೇವಸ್ಥಾನದ ತೋಟದ ಎರಡು ಬೃಹತ್ ಕೆರೆಗಳ‌ ಹೂಳೆತ್ತು ಕಾರ್ಯವನ್ನು‌ ಮಾಡಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ತಂಡದಲ್ಲಿ ತಾರಾ ರೈ, ಸುಗಂಧಿನಿ, ಗೀತಾ, ಹರಿಣಾಕ್ಷಿ, ತ್ರಿವೇಣಿ, ಮಧುರ, ವಾರಿಜ, ಪ್ರಭಾವತಿ, ಪುಷ್ಪಲತಾ, ಅಮಿತ, ಅಮಿತಾಲಕ್ಷ್ಮೀ ಮತ್ತು ಜಲಜ ಭಾಗವಹಿಸಿದ್ದಾರೆ.