ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ರವರಿಗೆ ಸುಳ್ಯದಲ್ಲಿ ಅದ್ಧೂರಿ ಬೀಳ್ಕೊಡುಗೆ

0

ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ರಮೇಶ್ ಬಿ.ಈ. ರವರು ಜು.31ರಂದು ಸೇವಾ ನಿವೃತ್ತರಾಗಲಿದ್ದು ಅವರಿಗೆ ರಮೇಶ್ ಬಿ.ಈ ಅಭಿನಂದನಾ ಸಮಿತಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಜು.30ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು.
ತಹಶೀಲ್ದಾರ್ ಮಂಜುನಾಥ್ ಜಿ. ಅಧ್ಯಕ್ಷತೆ ವಹಿಸಿದ್ದರು.

ರಮೇಶ್ ‌ಬಿ.ಇ. ರನ್ನು ಶಾಲು, ಹಾರ, ಮೈಸೂರು ಪೇಟ ಹಾಗೂ ಚಿನ್ನದ ಉಂಗುರ ತೊಡಿಸಿ ಅದ್ದೂರಿಯಾಗಿ ಅಭಿನಂದನಾ ಸಮಿತಿ ವತಿಯಿಂದ ಬೀಳ್ಕೊಡಲಾಯಿತು. ಆರತಿ ಬೆಳಗಿ, ತಿಲಕವಿಟ್ಟು ಗೌರವಿಸಲಾಯಿತು
ಬಳಿಕ ಶಿಕ್ಷಕರುಗಳ ಸಂಘ ಸಹಿತ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ರಮೇಶ್ ಬಿ.ಈ. ರವರ ಕುಟುಂಬಸ್ಥರು ಆಗಮಿಸಿ, ಗೌರವಿಸಿದರು.

ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೈ ಶಿವರಾಮಯ್ಯ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಇ.ಒ. ರಾಜಣ್ಣ, ಹೊಸದುರ್ಗ ತಾಲೂಕು ಶಿಕ್ಷಣಾಧಿಕಾರಿ ಸಯ್ಯದ್ ಮೋಸಿನ್, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿಂಗಾರ ಶೆಟ್ಟಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ವೀಣಾ ಎಂ.ಟಿ., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆರೆಮೂಲೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕೆ.ಎಸ್., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ., ತಾಲೂಕು ದೈ.ಶಿ.ಶಿಕ್ಷಕರ ಸಂಘದ ಅಧ್ಯಕ್ಷ ಸೂಫಿ ಪೆರಾಜೆ, ಪದವೀಧರ ಪ್ರಾ.ಶಾ. ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುನಿಲ್, ರೋಟರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ ವೇದಿಕೆಯಲ್ಲಿ ಇದ್ದರು.

ಶಿಕ್ಷಕಿ ಪೂರ್ಣಿಮಾ ಎಂ.ಎಂ. ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಪಾರೆಪ್ಪಾಡಿ ವಂದಿಸಿದರು.

ದೈ.ಶಿ.ಶಿಕ್ಷಕರ ಸಂಘದ ಅಧ್ಯಕ್ಷ ಧನಂಜಯ ಎಂ ಹಾಗೂ ಬೆಳ್ಳಾರೆ ಕೆ.ಪಿ.ಎಸ್. ಮುಖ್ಯ ಶಿಕ್ಷಕ ಜಿ.ಮಾಯಿಲಪ್ಪ ಕಾರ್ಯಕ್ರಮ ನಿರ್ವಹಿಸಿದರು.