ಅರಂಬೂರು ಮೂಕಾಂಬಿಕಾ ಭಜನಾ ಮಂದಿರದಲ್ಲಿ ಆಟಿದ ಗೌಜಿ ಕಾರ್ಯಕ್ರಮ

0

ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ಗೋಪಾಲ ಕೃಷ್ಣ ಸಭಾಂಗಣ ದಲ್ಲಿ ಅಂಬಿಕಾ ಮಹಿಳಾ ಮಂಡಲದ ವತಿಯಿಂದ ಆಟಿದ ಗೌಜಿ ಕಾರ್ಯಕ್ರಮ ವು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅಮಿತಾ ರೈ ಯವರ ಅಧ್ಯಕ್ಷತೆಯಲ್ಲಿ ಜು.27 ರಂದು ನಡೆಯಿತು. ಮಹಿಳಾ ಮಂಡಲದ ಹಿರಿಯ ಸದಸ್ಯೆಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಚೆನ್ನೆಮನೆ ಆಟ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀಮತಿ ಸತ್ಯಭಾಮಾ ಭಟ್ ಪ್ರಾರ್ಥನೆ ಯನ್ನು ಮಾಡಿದರು. ಶ್ರೀಮತಿ ಹಾರಾವತಿ ಕೆ.ಸಿ ಯವರು ಆಟಿ ತಿಂಗಳ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು.ಮಹಿಳಾ ಮಂಡಲದ ಸದಸ್ಯೆಯರು ಆಟಿಯ ತಿಂಗಳಲ್ಲಿ ಮಾಡುವ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ತಂದು ಎಲ್ಲರಿಗೂ ಹಂಚಿದರು.ಕಾರ್ಯಕ್ರಮದಲ್ಲಿ ಶ್ರೀಮತಿ ಪುಷ್ಪಾವತಿ ಸ್ವಾಗತಿಸಿ ಶ್ರೀಮತಿ ಅಮಿತಾ ರೈ ವಂದಿಸಿದರು. ಶ್ರೀಮತಿ ಹಾರಾವತಿ ಕಾರ್ಯಕ್ರಮ ನಿರೂಪಿಸಿದರು.