ಅಜ್ಜಾವರದಲ್ಲಿ ನಾಟಿ ಉತ್ಸವ

0

ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ ಇವುಗಳ ಜಂಟಿ ಆಶ್ರಯದಲ್ಲಿ ಅಜ್ಜಾವರದ ಕೊರಂಗುಬೈಲು ಗದ್ದೆಯಲ್ಲಿ ನಾಟಿ ಉತ್ಸವ ಕಾರ್ಯಕ್ರಮ ನಡೆಯಿತು.

ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ನೇಜಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕೃಷಿ ಇಲಾಖೆ ಸಹಾಯ ನಿರ್ದೇಶಕರಾದ ಗುರುಪ್ರಸಾದ್ ಮತ್ತು ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ತ್ ಮಲೆ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿ ಸುನಿಲ್ ರಾವ್ ಎಡನೀರು ಹಾಗೂ ಗದ್ದೆಯ ಮಾಲೀಕರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕರ್ಲಪ್ಪಾಡಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ, ಕೊಲ್ಚಾರ್ ಶಾಲಾ Sdmc ಅಧ್ಯಕ್ಷರಾದ ಸುದರ್ಶನ್ ಪಾತಿಕಲ್ಲು, ಮುಖ್ಯ್ಯೋಪಾಧ್ಯಾಯರಾದ ಶ್ರೀಮತಿ ಜಲಜಾಕ್ಷಿ,ಹಾಗೂ ಸರಕಾರಿ ಪ್ರೌಢಶಾಲೆ ಅಜ್ಜಾವರ ಮುಖ್ಯ ಗುರುಗಳಾದ ಅಶೋಕ್, ರಮ್ಯ, ರೇವತಿ ,ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಅಧ್ಯಾಪಕವೃಂದ , ಅಂಗನವಾಡಿ ಕೇಂದ್ರ ಅಜ್ಜಾವರ ಪುಟಾಣಿ ಮಕ್ಕಳು ಸೇರಿದಂತೆ ಗ್ರಾಮಪಂಚಾಯತ್ ಅಜ್ಜಾವರ ಸದಸ್ಯರಾದ ಶ್ವೇತಾಪುರುಷೋತ್ತಮ, ದಿವ್ಯಜಯರಾಮ, ಗ್ರಂಥಾಲಯ ಮೇಲ್ವಿಚಾರಕಿ ಕು.ಲಕ್ಷ್ಮಿ, ಸಾವಿತ್ರಿ ಬೈಪಾಡಿತ್ತಾಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶ್ರೀಮತಿ ಜಯಲಕ್ಷ್ಮಿ ಸಂಜೀವ ರಾವ್ ಮಾವಿನಪಳ್ಳ ಮನೆಯವರು ಮಾಡಿದರು.ಯುವತಿ ಮಂಡಲ ಕಾರ್ಯದರ್ಶಿ ಮಾಲತಿ,ವೇದಾವತಿ, ಪೂರ್ಣಿಮ ಪಡ್ಡoಬೈಲ್ ,ಚೈತ್ರ,ವಸಂತಿ ಪುರುಷೋತ್ತಮ,ಯುವಕ ಮಂಡಲ ಕ್ರೀಡಾಕಾರ್ಯದರ್ಶಿ ಗೌರೀಶ್, ಖಜಾಂಜಿ ಲೋಕೇಶ್ ರಾವ್, ಅನಿಲ್ ರಾಜ್ ಸೂರ್ಯಕುಮಾರ್, ದೇವರಾಜ, ಅಕ್ಷತ್,ಹೇಮಂತ್, ಸೀತಾರಾಮ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಗದ್ದೆಗಿಳಿದು ನೇಜಿ ನೆಟ್ಟು ಸಂಭ್ರಮಿಸಿದರು.ಪ್ರಾರ್ಥನೆಯನ್ನು ಶ್ರೀಮತಿ ವಿಶಾಲಸೀತಾರಾಮ ಕರ್ಲಪ್ಪಾಡಿ ನೆರವೇರಿಸಿ,ಧನ್ಯವಾದವನ್ನು ವಿನಯ್ ನಾರಲು,ಹಾಗೂ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸುದರು.