ವಿನೋಬನಗರ: ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಯೋಜನೆಯ ಜ್ಞಾನ ದೀಪ ಶಾಲಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಮಂಜೂರಾತಿಯಾದ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರವನ್ನು ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಆ.8ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಾಲ್ಸೂರು ಗೇಟ್ ಒಕ್ಕೂಟದ ಉಪಾಧ್ಯಕ್ಷ ವಾಸುದೇವ ವಿನೋಬನಗರ, ಜಾಲ್ಸೂರು ವಲಯದ ಮೇಲ್ವಿಚಾರಕ ತೀರ್ಥರಾಮ, ಸೇವಾಪ್ರತಿನಿಧಿ ಬಾಲಕೃಷ್ಣ ಕಾನ ಅಡ್ಕಾರು ಉಪಸ್ಥಿತರಿದ್ದರು.