ಕಲ್ಲೇರಿ: ಶ್ರೀ ಗೌರಿ ಮಹಿಳಾ ಮಂಡಳಿ ಪದಾಧಿಕಾರಿಗಳ ಆಯ್ಕೆ

0

ಶಿಬಾ ಎಸ್.ರೈ ಅಧ್ಯಕ್ಷೆ, ಸವಿತಾ ಕಲ್ಲೇರಿ ಪ್ರಧಾನ ಕಾರ್ಯದರ್ಶಿ

ಕಲ್ಲೇರಿಯ ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಶ್ರೀ ಗೌರಿ ಮಹಿಳಾ ಮಂಡಳಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರಾಗಿ ಪುಷ್ಪಾವತಿ ಕಲ್ಲೇರಿ, ಅಧ್ಯಕ್ಷರಾಗಿ ಶಿಬಾ ಎಸ್. ರೈ ಚಾಮೆತ್ತಡ್ಕ, ಉಪಾಧ್ಯಕ್ಷರಾಗಿ ಕವಿತಾ ಕಲ್ಲೇರಿ, ಪ್ರಧಾನ ಕಾರ್ಯದರ್ಶಿಯಾಗಿ ಸವಿತಾ ಕಲ್ಲೇರಿ, ಜೊತೆ ಕಾರ್ಯದರ್ಶಿಯಾಗಿ ಸುನಿತಾ ಜಯಕರ, ಕೋಶಾಧಿಕಾರಿಯಾಗಿ ಶುಭ ರೈ ಕಲ್ಲೇರಿ ಆಯ್ಕೆಯಾದರು.

ಗಣೇಶ್ ಫ್ರೆಂಡ್ಸ್ ಸರ್ಕಲ್ ಕಲ್ಲೇರಿ ಇದರ ಅಧ್ಯಕ್ಷ ಸುರೇಶ್ ರೈ ಕಲ್ಲೇರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಸರ್ಕಲ್ ಸ್ಥಾಪಕಾಧ್ಯಕ್ಷ ರಾಮಚಂದ್ರ ರೈ ಕಲ್ಲೇರಿ ಉಪಸ್ಥಿತರಿದ್ದರು. ತಾಲೂಕು ಯುವಜನ ಒಕ್ಕೂಟದ ನಿರ್ದೇಶಕರಾದ ಕಾರ್ತಿಕ್ ರೈ ಕಲ್ಲೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.