ಅಮರಪಡ್ನೂರು : ಪೋನಡ್ಕದಲ್ಲಿ ಕಾರ್ ಶೆಡ್ ಮೇಲೆ ಬರೆ ಜರಿದು ಬಿದ್ದು ಅಪಾರ ಹಾನಿ

0

ಅಮರಪಡ್ನೂರು ಗ್ರಾಮದ ಪೋನಡ್ಕ ಕೆ.ಬಿ. ನಾಯ್ಕರ ಮನೆಯ ವಾಹನ ಶೆಡ್ ನ ಮೇಲೆ ಬರೆ ಜರಿದುಬಿದ್ದು ಶೆಡ್ ಸಂಪೂರ್ಣ ನಾಶವಾಗಿರುವುದಲ್ಲದೆ ಶೆಡ್ಡಿನ ಒಳಗಿದ್ದ ಕಾರು ಜಖಂಗೊಂಡ ಘಟನೆ ಆ. ೧೩ರಂದು ನಡೆದಿದೆ.
ಆ. ೧೩ರಂದು ರಾತ್ರಿ ಸುರಿದ ಭೀಕರ ಮಳೆಗೆ ಈ ಘಟನೆ ನಡೆದಿದ್ದು, ಕಾರು ಭಾಗಶಃ ಹಾನಿಗೊಳಗಾಗಿದೆ. ಅಂದಾಜು ೧ ಲಕ್ಷ ನಷ್ಟ ಸಂಭವಿಸಿರಬಹುದೆಂದು ಮನೆಯವರು ತಿಳಿಸಿದ್ದಾರೆ.