ಕೊಡಗು ಸಂಪಾಜೆ: ಬಸ್ಸಿಗೆ ಸೈಡ್ ಕೊಡುವ ಯತ್ನ

0

ಕೆಸರಲ್ಲಿ ಹೂತುಹೋದ ಲಾರಿ

ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯೊಂದು ಬಸ್ಸಿಗೆ ಸೈಡ್ ಕೊಡುವ ಯತ್ನದಲ್ಲಿ ರಸ್ತೆ ಬದಿಯ ಕೆಸರಿನಲ್ಲಿ ಹೂತುಹೋದ ಘಟನೆ ಕೊಡಗು ಸಂಪಾಜೆ ಶಾಲಾ ಬಳಿ ಆ.14ರಂದು ಸಂಜೆ ಸಂಭವಿಸಿದೆ.

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸೊಂದು ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಬಸ್ಸಿಗೆ ಸೈಡ್ ಕೊಡುವ ಪ್ರಯತ್ನದಲ್ಲಿ ರಸ್ತೆ ಬದಿಯ ಕೆಸರಿನಲ್ಲಿ ಹೂತು ಹೋಗಿರುವುದಾಗಿ ತಿಳಿದುಬಂದಿದೆ.