ಜಾಲ್ಸೂರು: ಕಾರು – ಸ್ಕೂಟಿ ಅಪಘಾತ

0

ಸ್ಕೂಟಿ ಸವಾರನಿಗೆ ಗಾಯ

ಕಾರು ಮತ್ತು ಸ್ಕೂಟಿ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿ, ಸ್ಕೂಟಿ ಸವಾರ ಗಾಯಗೊಂಡ ಘಟನೆ ಜಾಲ್ಸೂರಿನಲ್ಲಿ ಆ.17ರಂದು ಮಧ್ಯಾಹ್ನ ಸಂಭವಿಸಿದೆ‌.

ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ಹಾಗೂ ಸುಳ್ಯದಿಂದ ಜಾಲ್ಸೂರಿಗೆ ಬರುತ್ತಿದ್ದ ಸ್ಕೂಟಿ ಜಾಲ್ಸೂರಿನ ಡಿ‌.ಸಿ‌.ಸಿ. ಬ್ಯಾಂಕ್ ಸಮೀಪದ ಮುಖ್ಯರಸ್ತೆಯಲ್ಲಿ ಢಿಕ್ಕಿಯಾಗಿದ್ದು, ಸ್ಕೂಟಿ ಸವಾರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಸ್ಥಳೀಯರು ಸೇರಿ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.