ಎಲಿಮಲೆಯಲ್ಲಿ ಅಕ್ಷಯ ಸ್ಟೀಲ್ಸ್ ಮತ್ತು ಹಾಡ್೯ ವೇರ್ಸ್ ಶುಭಾರಂಭ

0

ಅಕ್ಷಯ ಸ್ಟೀಲ್ಸ್ & ಹಾಡ್೯ ವೇರ್ಸ್ ಇದರ ಉದ್ಘಾಟನೆಯು ಎಲಿಮಲೆಯಲ್ಲಿ ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಹೆಚ್.ಆರ್. ಲವಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ಕೋಡ್ತುಗುಳಿ ವಹಿಸಿದ್ದರು. ‌


ಅತಿಥಿಗಳಾಗಿ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಜ್ಞಾನದೀಪ ವಿದ್ಯಾಸಂಸ್ಥೆಯ ಸಂಚಾಲಕ ಎ.ವಿ.ತೀರ್ಥರಾಮ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ಉಬರಡ್ಕ‌ಮಿತ್ತೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ದಾಮೋದರ‌ ಗೌಡ ಮದುವೆಗದ್ದೆ, ಆದಿತ್ಯ ಸೋಲಾರ್ ನ ರಾಜೇಶ್ ಭಟ್ ನೆಕ್ಕಿಲ, ನ್ಯಾಯವಾದಿಗಳಾದ ದಿನೇಶ್ ಮಡಪ್ಪಾಡಿ ಮುಖ್ಯ ಅತಿಥಿಗಳಾಗಿದ್ದರು.

ಪ್ರಗತಿಪರ ಕೃಷಿಕ ಮುರಳೀಧರ ಕೋಡ್ತುಗುಳಿ, ದೇವಚಳ್ಳ ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರ ಗೌಡ, ಅಬ್ದುರ್ರಯಾಝ್ ಜುಮ್ಮಾ ಮಸ್ಜಿದ್ ಎಲಿಮಲೆಯ ಅಧ್ಯಕ್ಷ ಅಬ್ದುಲ್ ಖಾದರ್ ಪಾಣಾಜೆ, ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಉದಯಗಿರಿ ಮಾವಿನಕಟ್ಟೆ ಇದರ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಸದಸ್ಯ ವೇಣುಗೋಪಾಲ‌ ಪುನ್ಕುಟ್ಟಿ, ಎಲಿಮಲೆ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.‌ಅಧ್ಯಕ್ಷ ಧನಂಜಯ ಬಾಳೆತೋಟ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಪ್ರಗತಿಪರ ಕೃಷಿಕ ಸೋಮಶೇಖರ ಕೇಪಳಕಜೆ, ಪ್ರಗತಿಪರ ಕೃಷಿಕ ಕೇಶವ ಕೋಡ್ತುಗುಳಿ, ಎಲಿಮಲೆ ಸೈಂಟ್ ಮೇರೀಸ್ ಇಂಡಸ್ಟ್ರೀಸ್ ಮಾಲಕ ಪಾಪಚ್ಚನ್, ಚಿನ್ನು ಕಾಂಪ್ಲೆಕ್ಸ್ ಮಾಲಕ ಗಣೇಶ್ ಭಟ್ ಹೊನ್ನಾಡಿ, ಶ್ರೀಮತಿ ಪ್ರೇಮಾ ಹೇಮನಾಥ ಕೋಡ್ತುಗುಳಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.

ಹೇಮನಾಥರವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರ ಕೆಲಸದಲ್ಲಿ ಯಾವುದೇ ರಾಜಿ ಇಲ್ಲ ಎಂದು ಗಣ್ಯರು ಶ್ಲಾಘಿಸಿದರು.

ಅಕ್ಷಯ ಸ್ಟೀಲ್ಸ್ & ಹಾಡ್೯ವೇರ್ಸ್ ನ ಮ್ಹಾಲಕ ಹೇಮನಾಥ ಕೋಡ್ತುಗುಳಿ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಎಲಿಮಲೆ ಪ್ರೌಢಶಾಲಾ ಶಿಕ್ಷಕ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು. ‌ಸಂಸ್ಥೆಯ ಸಿಬ್ಬಂದಿ ಯೋಗರಾಜ್ ವಂದಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಹಿರಿಯ ಮತ್ತು ಪ್ರಸ್ತುತ ಸಿಬ್ಬಂದಿಗಳನ್ನು‌ ಸನ್ಮಾನಿಸಲಾಯಿತು. ‌

ಬೆಳಿಗ್ಗೆ ಭಕ್ತಿ ರಸಮಂಜರಿ ನಡೆಯಿತು.‌ ಸಭಾ ಕಾರ್ಯಕ್ರಮದ ನಂತರ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಪ್ರಯುಕ್ತ ಸಂಸ್ಥೆಯ ವತಿಯಿಂದ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾನವನ್ನು ಲೋಕರ್ಪಣೆ ಮಾಡಲಾಯಿತು.

ಕಾರ್ಯಕ್ರಮ ದಲ್ಲಿ ಹೇಮನಾಥ ಕೋಡ್ತುಗುಳಿಯವರ ಮನೆಯವರು, ಕುಟುಂಬಸ್ಥರು, ಸಂಸ್ಥೆಯ ಗ್ರಾಹಕರು‌ ಉಪಸ್ಥಿತರಿದ್ದರು.