ಅಪಘಾತದಿಂದ ರಸ್ತೆ ಮಧ್ಯೆಯೇ ಇಹಲೋಕ ತ್ಯಜಿಸಿದ ನಾಯಿ

0

ಸದಾ ಜೊತೆಗಿರುತ್ತಿದ್ದ ಬಳಗದಿಂದ ಮೂಕ ರೋಧನೆ

ಪೈಚಾರಿನಲ್ಲಿ ನಡೆದ ಮನಕಲಕುವ ದೃಶ್ಯ

ಅಪಘಾತದಿಂದ ರಸ್ತೆ ಮಧ್ಯೆಯೇ ನಾಯಿಯೊಂದು ಪ್ರಾಣ ಬಿಟ್ಟಿದ್ದು, ಸದಾ ಜೊತೆಗಿರುತ್ತಿದ್ದ ಇತರ ನಾಯಿಗಳು ರೋಧಿಸುತ್ತಿರುವ ಮನಕಲಕುವ ದೃಶ್ಯ ಸುಳ್ಯದ ಪೈಚಾರ್ ಜಂಕ್ಷನ್‌ನ ರಸ್ತೆ ಮಧ್ಯೆ ಕಂಡು ಬಂದಿದೆ.

ಸುಮಾರು ೪-೫ ನಾಯಿಗಳು ರಸ್ತೆ ಬದಿಯಲ್ಲಿ ಓಡಾಡುತ್ತಿತ್ತು. ಈ ವೇಳೆ ಒಂದು ನಾಯಿ ರಸ್ತೆಗೆ ಅಡ್ಡಲಾಗಿ ಓಡಿದಾಗ ಇದೇ ರಸ್ತೆಯಲ್ಲಿ ಬಂದ ಕೇರಳ ಸರಕಾರಿ ಬಸ್ಸು ನಾಯಿಗೆ ಡಿಕ್ಕಿ ಹೊಡೆದು ನಾಯಿ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿತು.
ಇದನ್ನು ಗಮನಿಸಿದ ಇತರ ನಾಯಿಗಳು ಅಲ್ಲಿಗೆ ಹೋಗಿ ತುಂಬಾ ಹೊತ್ತು ನಿಂತು ಬಿಟ್ಟಿತು. ಈ ದೃಶ್ಯ ನೋಡುಗರ ಮನಕಲಕುವಂತಿತ್ತು.