ಆನ್‌ಲೈನ್ ಯೋಗಾಸನ ಸ್ಪರ್ಧೆಯಲ್ಲಿ ಮಿಥುನ ಅಶ್ವಥ್ ಜಬಳೆಯವರಿಗೆ 5ನೇ ಸ್ಥಾನ

0


ಬಿಕೆಎಸ್ ಐಯ್ಯಂಗಾರ್ ಸ್ಮರಣಾರ್ಥ ನಡೆಸಿದ ೮ನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್‌ಶಿಷ್ ೨೦೨೪ ಇದರ ಆನ್‌ಲೈನ್ ಯೋಗಾಸನ ಸ್ಪರ್ಧೆಯಲ್ಲಿ ಐವರ್ನಾಡಿನ ಮಿಥುನ ಅಶ್ವಥ್ ಜಬಳೆಯವರಿಗೆ ೫ನೇ ಸ್ಥಾನ ದೊರಕಿದೆ. ಇವರು ಐವರ್ನಾಡು ಗ್ರಾಮದ ಅಶ್ವಥ್ ಜಬಳೆಯವರ ಪತ್ನಿ. ಬಾಬ್ಲುಬೆಟ್ಟು ಬಾಬು ಗೌಡ ಮತ್ತು ಚಂದ್ರಾವತಿಯವರ ಪುತ್ರಿ.