ಐವರ್ನಾಡು ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಪುರುಷೋತ್ತಮ ಗೌಡ ಪಿ.ನಿವೃತ್ತಿ

0

ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಬಿಲ್ಲು ಕಲೆಕ್ಟರ್ ಆಗಿದ್ದ ಪುರುಷೋತ್ತಮ ಗೌಡ ಪಿ.ನಿಡುಬೆ ಪೂಜಾರಿಮನೆ ಇವರು ಆ.31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಇವರು ಗ್ರಾಮ ಪಂಚಾಯತ್ ನಲ್ಲಿ ಸುದೀರ್ಘ 34 ವರ್ಷ ಸೇವೆ ಸಲ್ಲಿಸಿದ್ದರು.
ಸುಳ್ಯದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ ಇವರು 1990 ರಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಗೆ ಎಟೆಂಡರ್ ಆಗಿ ಕರ್ತವ್ಯಕ್ಕೆ ಹಾಜರಾದರು.
1993 ರಲ್ಲಿ ಬಿಲ್ಲು ಕಲೆಕ್ಟರ್ ಆಗಿ ಭಡ್ತಿ ಪಡೆದು ಸೇವೆ ಸಲ್ಲಿಸಿದರು.
ಇವರ ಪತ್ನಿ ಶ್ರೀಮತಿ ರೋಹಿತಾಕ್ಷಿ ಪರ್ಲಿಕಜೆ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುತ್ರ ಮಿಥುನ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ಪುತ್ರಿ ಮೈಥಿಲಿ ಮಂಗಳೂರು ಶ್ರೀ ದೇವಿ ಕಾಲೇಜಿನಲ್ಲಿ ಬಿ ಫಾರ್ಮಾ ವ್ಯಾಸಾಂಗ ಮಾಡುತ್ತಿದ್ದಾರೆ.