ಅಜ್ಜಾವರ:ಡಿಜಿಟಲ್ ಸಾಕ್ಷರತ ಅಧಿವೇಶನ ಕಾರ್ಯಕ್ರಮ

0

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಡೆಲ್ ಮತ್ತು ಶಿಕ್ಷಣ ಫೌಂಡೇಶನ್ ವತಿಯಿಂದ ಇಂದು ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡೇರಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಡಿಜಿಟಲ್ ಸಾಕ್ಷರತಾ ಅಧಿವೇಶನ ಕಾರ್ಯಕ್ರಮವನ್ನು ನಡೆಸಲಾಯಿತು. ಮಾಹಿತಿಯನ್ನು ಜಿಲ್ಲಾ ಸಂಯೋಜಕರಾದ ಲವೀಶ್ ನೀಡಿದರು.

ಕಾರ್ಯಕ್ರಮದ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪ್ರಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಉಷಾ, ಪಂಚಾಯತ್ ಸದಸ್ಯರಾದ ಸತ್ಯವತಿ ಬಸವನಪಾದೆ ಗ್ರಂಥಾಲಯ ಮೇಲ್ವಿಚಾರಕಿ ಹಾಗೂ ಸ್ತ್ರೀ ಶಕ್ತಿ ಸಂಘದ 36 ಸದಸ್ಯರು ಭಾಗವಹಿಸಿದ್ದರು.