ಮಕ್ಕಳ ಕಲ್ಯಾಣ ಸಮಿತಿ ದ.ಕ. ಜಿಲ್ಲಾ ಸಮಿತಿ ಸದಸ್ಯರಾಗಿ ನ್ಯಾಯವಾದಿ ಅಬೂಬಕ್ಕರ್ ನೇಮಕ

0

ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರನ್ನಾಗಿ ಸುಳ್ಯದ ನ್ಯಾಯವಾದಿ ಜೆ.ಎನ್.ಅಬೂಬಕ್ಕರ್ ಅಡ್ಕಾರ್ ರವರನ್ನು ಮೂರು ವರ್ಷಗಳ ಅವಧಿಗೆ ರಾಜ್ಯ ಸರಕಾರ ನೇಮಿಸಿದೆ.

ಬಾಲನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣಾ ಕಾಯ್ದೆ 2015 ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲನ್ಯಾಯ ಮಾದರಿ ನಿಯಮಗಳು 2016 ರನ್ವಯ ತಿದ್ದುಪಡಿ ಮಾದರಿ ನಿಯಮಗಳು 2022 ರಂತೆ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಸರಕಾರ ನೇಮಿಸಿದೆ. ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರನ್ನಾಗಿ ಅಕ್ಷತಾ ಆದರ್ಶ ಮಂಗಳೂರು ಇವರನ್ನು ನೇಮಿಸಲಾಗಿದ್ದು, ಮೂವರು ಸದಸ್ಯರಲ್ಲಿ ಒಬ್ಬರನ್ನಾಗಿ ಸುಳ್ಯದ ನ್ಯಾಯವಾದಿ ಜೆ.ಎನ್. ಅಬೂಬಕ್ಕರ್ ರವರನ್ನು ಮೂರು ವರ್ಷದ ಅವಧಿಗೆ ರಾಜ್ಯ ಸರಕಾರ ನೇಮಿಸಿದೆ.