ಐವರ್ನಾಡಿನಲ್ಲಿ ಸುಳ್ಯ ರೋಟರಿ ಕ್ಲಬ್ ವತಿಯಿಂದ ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಮಾಹಿತಿ ಕಾರ್ಯಾಗಾರ

0

ಸುಳ್ಯ ರೋಟರಿ ಕ್ಲಬ್ ವತಿಯಿಂದ ಗರ್ಭಕಂಠದ ಕ್ಯಾನ್ಸರ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ಕುರಿತು ಮಾಹಿತಿ ಕಾರ್ಯಾಗಾರವು ಐವರ್ನಾಡಿನ ಗ್ರಾಮ ವಿಕಾಸ ಸಭಾ ಭವನದಲ್ಲಿ ಸೆ.17 ರಂದು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಸ್ತ್ರೀ ರೋಗ ತಜ್ಞೆ ಡಾ. ವೀಣಾ ಫಾಲಚಂದ್ರ ರವರು ಗರ್ಭಕಂಠದ ಕ್ಯಾನ್ಸರ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನು ನೀಡಿದರು. ಆರೋಗ್ಯದ ಬಗ್ಗೆ ಆಲಸ್ಯ , ನಾಚಿಕೆ ತೋರಿಸದೆ ವೈದ್ಯರಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷೆ ರೊ ಯೋಗಿತ ಗೋಪಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಮಮತಾ ಸತೀಶ್ ಮಡ್ತಿಲ ಹಾಗೂ ಸುಳ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರೊ ಚಿಂತನ ಸುಬ್ರಹ್ಮಣ್ಯ ಉಪಸ್ಥಿರಿದ್ದರು.


ರೋಟರಿ ಕ್ಲಬ್ ಸದಸ್ಯ ರಾದ ರೊ ಮಧುರ ಜಗದೀಶ್ ಮತ್ತು ಇನ್ನರ್ ವೀಲ್ ಕ್ಲಬ್ ನ ಸದಸ್ಯೆ ನಮಿತಾ ನವೀನ್ ಮತ್ತು ಐವರ್ನಾಡು ಸ್ತ್ರೀ ಶಕ್ತಿ , ಮಹಿಳಾ ಮಂಡಲದ ಸದಸ್ಯೆಯರು ಪಾಲ್ಗೊಂಡಿದ್ದರು.