ಪ್ರಧಾನಿ ಮೋದಿ ಯವರ ಹುಟ್ಟು ಹಬ್ಬದಂದು ಚೊಕ್ಕಾಡಿಯಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಭಜನಾ ಕಾರ್ಯಕ್ರಮ

0


ಚೊಕ್ಕಾಡಿಯ ಗರುಡ ಭಜಕ ವೃಂದದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಭಜನಾ ಸಂಕೀರ್ತನೆ ಮಾಡುವ ಮೂಲಕ ವಿಶಿಷ್ಠವಾಗಿ ಸೆ.17 ರಂದು ಗರುಡ ಯುವಕ ಮಂಡಲದ ಕಟ್ಟಡದಲ್ಲಿ ಆಚರಿಸಲಾಯಿತು.

ಮೋದಿಯವರಿಗೆ ಆಯುರಾರೋಗ್ಯ ಶ್ರೇಯಸ್ಸು ಲಭಿಸಲೆಂದು ಪ್ರಾರ್ಥಿಸಿ ಭಜನಾ ಕಾರ್ಯಕ್ರಮ ‌ಹಮ್ಮಿಕೊಳ್ಳಲಾಯಿತು. ಗರುಡ ಯುವಕ ಮಂಡಲ ಮತ್ತು ಮಯೂರಿ ಯುವತಿ ಮಂಡಲದ ಸದಸ್ಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.