ಕೇರ್ಪಳ, ಕುರುಂಜಿಭಾಗ್ ರಸ್ತೆಯಲ್ಲಿ ಬೀದಿ ನಾಯಿ ಹಾವಳಿ

0

ಸುಳ್ಯ ನಗರದ ಕೇರ್ಪಳ, ಕುರುಂಜಿಭಾಗ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದಾಗಿ ವರದಿಯಾಗಿದೆ.

ಕೇರ್ಪಳ, ಕುರುಂಜಿಗುಡ್ಡೆ, ಕುರುಂಜಿಭಾಗ್ ರಸ್ತೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ. ಮೂರ್ನಾಲ್ಕು ಮಂದಿಗೆ ಕಚ್ಚಿರುವುದಾಗಿಯೂ ಹೇಳಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಹಾಸ್ಟೆಲ್ ಗಳಿದ್ದು ಶಾಲಾ, ಕಾಲೇಜು ಮಕ್ಕಳು, ಸಾರ್ವಜನಿಕರು ನಡೆದುಕೊಂಡು ಹೋಗುವಾಗ ನಾಯಿಗಳು ಹಿಂಬಾಲಿಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತು ನಗರಾಡಳಿತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.