ಬೆಳ್ಳಾರೆ: ಸ್ವಿಫ್ಟ್ ಕಾರಿನಲ್ಲಿ ಅಕ್ರಮ ದನ ಸಾಗಾಟ

0

ಅರೋಪಿ ಪರಾರಿ-ದನ ಹಾಗೂ ಕಾರು ಪೊಲೀಸ್ ವಶ

ಬೆಳ್ಳಾರೆಯಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಅ.14ರಂದು ರಾತ್ರಿ ನಡೆದಿದೆ.
ಬೆಳ್ಳಾರೆಯಲ್ಲಿ ಶಿಪ್ಟ್ ಕಾರಿನಲ್ಲಿ ಮೂರು ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ನಿಲ್ಲಿಸಿದ್ದು ವಾಹನ ಚಾಲಕ ಓಡಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ವಾಹನ ಮತ್ತು ದನಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ
.