ಸುಬ್ರಹ್ಮಣ್ಯ : ಹೊಂಡಕ್ಕೆ ಬಿದ್ದು ಒದ್ದಾಡ್ತಿದ್ದ ಹಸುವಿನ ರಕ್ಷಣೆ ಮಾಡಿದ ಡಾ. ರವಿ ಕಕ್ಕೆಪದವು ತಂಡ

0

ಗುಂಡಿಗಳನ್ನು ಮುಚ್ಚಿಸುವಂತೆ ಪಂಚಾಯತ್ ಗೆ ಮನವಿ

ಸುಬ್ರಹ್ಮಣ್ಯದ ಪರ್ವತಮಕ್ಕಿ ಎಂಬಲ್ಲಿ ಹೊಂಡಕ್ಕೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದ ಹಸುವನ್ನು ಡಾ. ರವಿ ಕಕ್ಕೆಪದವು ಮತ್ತು ಯುವಕರ ತಂಡ ರಕ್ಷಣೆ ಮಾಡಿದ ಘಟನೆ ಅ. 14ರಂದು ಸಂಜೆ ನಡೆದಿದೆ.


ಪರ್ವತಮಕ್ಕಿಯ ಬಳಿ ಆನಂದ ಮೂಲ್ಯ ಎಂಬವರು ತಮ್ಮ ಅಳಿಯ ಗಿರೀಶ್ ಎಂಬವರಿಗೆ ಜಾಗವನ್ನು ನೀಡಿದ್ದರು. ಗಿರೀಶರ ಕುಟುಂಬ ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಅ.೧೪ ರಂದು ಸಂಜೆ ರಘು ಅಮ್ಮಣ್ಣಾಯ ಎಂಬವರು ಆ ದಾರಿಯಲ್ಲಿ ಹೋಗುತ್ತಿದ್ದಾಗ ವಾಸವಿಲ್ಲದ ಮನೆಯ ಹಿಂಭಾಗದ ಶೌಚಾಲಯದ ಹೊಂಡದಿAದ ಹಾವು ಬುಸುಗುಟ್ಟುವ ರೀತಿಯ ಶಬ್ದ ಕೇಳಿಸಿತ್ತೆನ್ನಲಾಗಿದೆ. ಇದನ್ನು ಕೇಳಿದ ಅಮ್ಮಣ್ಣಾಯರು ಸಮೀಪದ ಹೊಂಡದಲ್ಲಿ ಇಣುಕಿ ನೋಡಿದಾಗ ಹಸು ಬಿದ್ದು ನರಳುತ್ತಿರುವುದು ಕಂಡುಬAತು. ಅವರು ಕೂಡಲೇ ಸುಬ್ರಹ್ಮಣ್ಯದಲ್ಲಿ ಆಪತ್ಪಾಂದವರೆನಿಸಿಕೊಂಡಿರುವ ಡಾ. ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಉದ್ಯಮಿ ಡಾ. ರವಿ ಕಕ್ಕೆಪದವುರವರಿಗೆ ವಿಷಯ ಮುಟ್ಟಿಸಿದರು. ಡಾ. ರವಿ ಕಕ್ಕೆಪದವುರವರು ಕೆಲವು ಯುವಕರಿಗೆ ವಿಷಯ ತಿಳಿಸಿ ಹಗ್ಗ, ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಂಡು ಘಟನಾ ಸ್ಥಳಕ್ಕೆ ಧಾವಿಸಿ ಹಗ್ಗದ ಮೂಲಕ ಹಸುವನ್ನು ಮೇಲಕ್ಕೆತ್ತಿದರು.

ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿದ ಡಾ. ರವಿ ಕಕ್ಕೆಪದವುರವರು ಯಾರು ಕೂಡ ಮನೆಯ ಹಿಂಭಾಗದಲ್ಲಿ ಈ ರೀತಿ ಹೊಂಡ ತೆಗೆದು ಇಡಬಾರದು. ಇದಕ್ಕಿಂತ ಮೊದಲೊಮ್ಮೆ ಇದೇ ಹೊಂಡಕ್ಕೆ ದನ ಬಿದ್ದದ್ದನ್ನು ನಾವು ರಕ್ಷಣೆ ಮಾಡಿದ್ದೆವು. ಈ ರೀತಿಯ ಹೊಂಡಗಳು ಕಂಡುಬAದಲ್ಲಿ ಸ್ಥಳೀಯ ಪಂಚಾಯತ್ ಶೀಘ್ರ ಕ್ರಮಕೈಗೊಳ್ಳಬೇಕು. ಸುಬ್ರಹ್ಮಣ್ಯ ಪುಣ್ಯಕ್ಷೇತ್ರವಾಗಿದ್ದು, ಅಲ್ಲಲ್ಲಿ ದನಗಳು ತಿರುಗಾಡಿಕೊಂಡಿರುತ್ತದೆ. ಇದಕ್ಕಾಗಿಯೇ ನಾವು ಕಳೆದ ೯ ವರ್ಷಗಳಿಂದ ಪ್ರತೀ ಆದಿತ್ಯವಾರ ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ನಮ್ಮ ಟ್ರಸ್ಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಸುಮಾರು ೪೦ ಮಂದಿ ಯುವಕರ ತಂಡದೊAದಿಗೆ ಮಾಡುತ್ತಾ ಬಂದಿದ್ದೇವೆ. ನಾವು ಹಲವು ಬಾರಿ ಹಸುಗಳನ್ನು ರಕ್ಷಣೆ ಮಾಡಿದ್ದೇವೆ. ಅನಾಥರನ್ನು ಆರೈಕೆ ಮಾಡಿಕೊಂಡು ಬಂದಿದ್ದೇವೆ. ಸ್ಥಳಿಯರೂ ಈ ಬಗ್ಗೆ ಜಾಗರೂಕತೆ ವಹಿಸಬೇಕು ಮತ್ತು ನಮ್ಮೊಂದಿಗೆ ಸಹಕರಿಸಬೇಕೆಂದು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಡಾ. ರವಿ ಕಕ್ಕೆಪದವು ಮತ್ತವರ ಪುತ್ರ ಗಣೇಶ್, ರಘು ಅಮ್ಮಣ್ಣಾಯ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಗಿರೀಶ್ ಆಚಾರ್ಯ ಮತ್ತಿತರರು ದಿನವನ್ನು ಮೇಲಕ್ಕೆತ್ತಲು ಸಹಕರಿಸಿದರು.