ಪಂಜ :ಜೇಸಿ ಸಪ್ತಾಹ-2024

0

ಪರಿಣಾಮಕಾರಿ ಭಾಷಣ ಕಲೆಯ ತರಬೇತಿ ಕಾರ್ಯಗಾರ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಕಾರದೊಂದಿಗೆ ಅ.14 ರಂದು ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರ ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜಿನಲ್ಲಿ ಪದವಿ ವಿದ್ಯಾಲಯದ ಆಯ್ದ 30 ವಿದ್ಯಾರ್ಥಿಗಳಿಗೆ ನಡೆಯಿತು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.

ತರಬೇತುದಾರರಾಗಿ ವಲಯ ತರಬೇತುದರರಾದ ಸವಿತಾರ ಮುಡೂರು, ಸೋಮಶೇಖರ್ ನೇರಳ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ., ಐಕ್ಯೂಎಸಿ ಸಂಯೋಜಕಿ ಲತಾ ಬಿ ಹಾಗೂ ಜೇಸಿಐ ಪಂಜ ಪಂಚಶ್ರೀ ನಿಕಟಪೂರ್ವಾಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ,ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ, ಸಪ್ತಾಹ ನಿರ್ದೇಶಕ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಶ್ವತ್ ಬಾಬ್ಲುಬೆಟ್ಟು ಹಾಗೂ ನಾಗಮಣಿ ಕೆದಿಲ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.ಭರತ್ ನೆಕ್ರಾಜೆ ಸ್ವಾಗತಿಸಿದರು.ಜೀವನ್ ಶೆಟ್ಟಿಗದ್ದೆ ವಂದಿಸಿದರು. ಅ.19 ರ ತನಕ ನಿರಂತರ ಕಾರ್ಯಕ್ರಮ: ಅ.15 ರಂದು ಬೆಳಿಗ್ಗೆ ಗಂಟೆ 10 ರಿಂದ ಸುರೇಶ್ ಬಲ್ನಾಡ್ ರವರ ತೋಟದಲ್ಲಿ ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮ.

ಅ.16. ರಂದು ಸಂಜೆ ಗಂಟೆ 7 ರಿಂದ ಗುತ್ತಿಗಾರು ದೇವಿ ಸಿಟಿ ಕಾಂಪ್ಲೆಕ್ಸ್ ಸಭಾ ಭವನದಲ್ಲಿ ಸಾಧಕರಿಗೆ ಸನ್ಮಾನ ಮತ್ತು ನಗುವಿನ ಹಬ್ಬ ನಡೆಯಲಿದೆ . ಮುಖ್ಯ ಅತಿಥಿಯಾಗಿ ಸುಳ್ಯ ಟಿ ಎ ಪಿ ಸಿ ಎಂ ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ದೇರಪ್ಪಜ್ಜನ ಮನೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಪಾಲ್ಗೊಳ್ಳಲಿದ್ದಾರೆ. ನಾಟಿ ವೈದ್ಯ ಶ್ರೀಮತಿ ಪುಷ್ಪಾ ದೇವಿದಾಸ್ ಬುಡ್ಲೆಗುತ್ತು, ಭಾರತೀಯ ಸೇನೆಯೊಂದಿಗೆ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡ 2000 ಕಿ.ಮಿ ಕ್ರಮಿಸಿದ ಸಾಹಸಿ ವೃಷ್ಠಿ ಮಲ್ಕಜೆ, ವಿಶ್ವ ದಾಖಲೆ ನಿರ್ಮಿಸಿದ ಯೋಗ ಪಟು ವಿಹಾನಿ ವಾಲ್ತಾಜೆ, ಮಂಗಳೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಶ್ರಾವ್ಯ ಮುತ್ಲಾಜೆ ರವರನ್ನು ಜೇಸಿ ವಲಯ ಅಧ್ಯಕ್ಷ ಗಿರೀಶ್ ಎಸ್ ಪಿ ಸನ್ಮಾನಿಸಲಿದ್ದಾರೆ. ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ಆಕರ್ಷ್ ಕುಳ್ಳಂಪಾಡಿ ಉಪಸ್ಥಿತರಿರುವರು. ನಗುವಿನ ಹಬ್ಬ ದಲ್ಲಿ ಕುಡ್ಲ ಕುಸಲ್ ತಂಡದಿಂದ ರವಿ ರಾಮಕುಂಜ ಅಭಿನಯದ ತೆಲಿಕೆದ ಕಮ್ಮೆನ ಪ್ರದರ್ಶನ ಗೊಳ್ಳಲಿದೆ.

ಅ.17 ರಂದು ಬೆಳಿಗ್ಗೆ ಗಂಟೆ 9 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಮುಕ್ತ ಚಿತ್ರಕಲಾ ಮತ್ತು ಕೇರಂ ಸ್ಪರ್ಧೆ ಜರುಗಲಿದೆ. ಚಿತ್ರಕಲಾ ಸ್ಪರ್ಧೆ ಎಲ್‌ ಕೆ ಜಿಯಿಂದ 1 ನೇ ತರಗತಿ, 2ರಿಂದ 4ನೇ ತರಗತಿ, 5 ರಿಂದ 7 ನೇ ತರಗತಿ,8 ರಿಂದ 10 ನೇ ತರಗತಿ ಮತ್ತು ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ.

ಅ.18 ರಂದು ಸಂಜೆ ಗಂಟೆ 6.30 ರಿಂದ ಪಂಜ ಲಯನ್ಸ್ ಭವನದಲ್ಲಿ ಕೌಟುಂಬಿಕ ತರಬೇತಿ ಕಾರ್ಯಗಾರ ನಡೆಯಲಿದೆ. ಅ.19 ರಂದು ಸಂಜೆ ಗಂಟೆ 7 ರಿಂದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಪಿ ಉಮೇಶ್ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ ರವರಿಗೆ ಕಮಲ ಪತ್ರ ಪುರಸ್ಕಾರ ನಡೆಯಲಿದೆ. ಜೇಸಿಐ ಪೂರ್ವ ವಲಯಾಧ್ಯಕ್ಷ ಪುರಂದರ ರೈ ಪರಸ್ಕರಿಸುವವರು. ಅಂತರಾಷ್ಟ್ರೀಯ ಈಜು ಪಟು ದಿಗಂತ್ ವಿ ಎಸ್, ಮೈಸೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಪ್ರಜ್ಞಾ ಎ ಡಿಸೋಜ, ಉದಯೋನ್ಮುಖ ಯಕ್ಷಗಾನ ಭಾಗವತ ರಚನಾ ಚಿದ್ಗಲ್ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ . ಸಾಂಸ್ಕೃತಿಕ ಸಂಭ್ರಮದಲ್ಲಿ ಡ್ಯಾನ್ಸ್ ಮತ್ತು ಬೀಟ್ಸ್ ಮತ್ತು ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ, ಲಕುಮಿ ತಂಡದ ಕುಸಾಲ್ದ ಕಲಾವಿದರ್ ಅಭಿನಯಿಸುವ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನಗೊಳ್ಳಲಿದೆ.