ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ ಅಬುದಾಬಿ ಸಮಿತಿ ವತಿಯಿಂದ ಬೃಹತ್ ಜಲ್ಸತುಲ್ ಖಾದಿರಿಯಾ ಮಜ್ಲಿಸ್ ಹಾಗೂ ನೂತನ ಸಮಿತಿ ರಚನೆ ಅ. 20 ರಂದು ಕೆ.ಸಿ.ಎಫ್. ಅಬುಧಾಬಿ ಆಡಿಟೋರಿಯಂ ನಲ್ಲಿ ನಡೆಸಲಾಯಿತು.
ಕೆಸಿಎಫ್ ಅಬುದಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಬಹು ಮುಸ್ತಫಾ ಸಖಾಫಿ ಸ್ವಾಗತಿಸಿದರು. ಹಸೈನಾರ್ ಅಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಸಂಸ್ಥೆಯ ಸಾರಥಿ ಬಹು ಖಲೀಲ್ ಹಿಮಮಿ ಸಖಾಫಿ ಮಾತನಾಡಿ ಸಮುದಾಯದ ಬಡ ನಿರ್ಗತಿಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ದಾರುಲ್ ಹುದಾ ತಂಬಿನಮಕ್ಕಿ ಕಳೆದ ಸುಮಾರು ವರ್ಷಗಳಿಂದ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳನ್ನು ಸವಿವರವಾಗಿ ವಿವರಿಸಿದರು. ಬೆಂಗಳೂರು ಸರದಿಯ ಫೌಂಡೇಶನ್ ಸಾರಥಿ ಬಹು ಶಾಫಿ ಶಾದಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ 2024-25 ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
*ಸಲಹಾ ಮಂಡಳಿಗೆ ಅಬ್ದುಲ್ ಹಮೀದ್ ಸಅದಿ, ಹಸೈನಾರ್ ಅಮಾನಿ, ಕೆ.ಹೆಚ್. ಮುಹಮ್ಮದ್ ಕುಂಞಿ ಸಖಾಫಿ, ಪಿ.ಎಂ.ಅಬ್ದುಲ್ ಹಮೀದ್ ,ಇಬ್ರಾಹಿಂ ಬ್ರೈಟ್ ಮಾರ್ಬಲ್, ಹಾಜಿ ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್ ಅಬ್ದುಲ್ ರಜಾಕ್ ಐವ ತೊಕ್ಲು ಎನ್ಮ್ಹೂರ್ ಆಯ್ಕೆಯಾದರು.
ಅಧ್ಯಕ್ಷರಾಗಿ ಮುಸ್ತಫಾ ಸಖಾಫಿ ಕಳಂಜ, ಉಪಾಧ್ಯಕ್ಷರುಗಳಾಗಿ -ಇಸ್ಮಾಯಿಲ್ ಅಹ್ಸನಿ, ಮುನೀರ್ ಅಲೆಕ್ಕಾಡಿ, ಗಫೂರ್ ಸಂಪಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ನಿಂತಿಕ್ಕಲ್, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಬೆಳ್ಳಾರೆ, ಇರ್ಷಾದ್ ಪೆರುವಾಜೆ, ಜಲಾಲ್ ಬೆಳ್ಳಾರೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಫಿ ಮಾಡಾವು, ಸಂಯೋಜಕರಾಗಿ ಮುಕ್ತಾರ್ ಹಿಮಾಮಿ ಸಖಾಫಿ ಮೇನಾಲ ಆಯ್ಕೆಯಾದರು.
ಮುಸ್ತಫಾ ನಿಂತಿಕ್ಕಲ್ ವಂದಿಸಿದರು