ಜಾಲ್ಸೂರು ಗ್ರಾಮದ ಮಹಾಬಡ್ಕದ ವ್ಯಕ್ತಿಯೋರ್ವರು ಮನೆಯ ಸಮೀಪ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.29ರಂದು ಮಧ್ಯಾಹ್ನ ಸಂಭವಿಸಿದೆ.
ಮಹಾಬಲಡ್ಕದ ಕುಟ್ಟಿ ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ 60 ವರ್ಷ ವಯಸ್ಸಾಗಿತ್ತು.
ಕುಟ್ಟಿ ಅವರು ಈ ಹಿಂದೆ ಅಡಿಕೆ ಕೊಯ್ಯುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅಸೌಖ್ಯದಿಂದ ಮನೆಯಲ್ಲಿ ಇದ್ದರೆಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಮೃತರು ಪತ್ನಿ ಲಕ್ಷ್ಮಿ, ಪುತ್ರ ನವಿನ, ಪುತ್ರಿ ಕಾವ್ಯ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.